alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಿಯಾಗೆ ಇಷ್ಟು ಹತ್ತಿರವಾದ ರಣಬೀರ್

ಆಲಿಯಾ ಭಟ್ ಹಾಗೂ ಡಿಂಪಲ್ ಕಪಾಡಿಯಾ ಬಲ್ಗೇರಿಯಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಬ್ರಹ್ಮಾಸ್ತ್ರ ಶೂಟಿಂಗ್ ಸದ್ಯ ಬಲ್ಗೇರಿಯಾದಲ್ಲಿ ನಡೆಯುತ್ತಿದ್ದು, ಆಲಿಯಾ ಶೂಟಿಂಗ್ ಮುಗಿಸಿ ಭಾರತಕ್ಕೆ ಬಂದಿದ್ದಾಳೆ. ಇದಕ್ಕೂ ಮುನ್ನ ಬಲ್ಗೇರಿಯಾದಲ್ಲಿ ನಡೆದ ಪಾರ್ಟಿಯೊಂದರ ಫೋಟೋ ವೈರಲ್ ಆಗಿದೆ.

ಬ್ರಹ್ಮಾಸ್ತ್ರ ಚಿತ್ರದ ಸಿಬ್ಬಂದಿಯೊಬ್ಬರ ಹುಟ್ಟುಹಬ್ಬದ ಪಾರ್ಟಿಯನ್ನು ಬಲ್ಗೇರಿಯಾದಲ್ಲಿ ಮಾಡಲಾಗಿದೆ. ಈ ಪಾರ್ಟಿಗೆ ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಕೂಡ ಬಂದಿದ್ದ. ಆಲಿಯಾ, ರಣಬೀರ್ ಫೋಟೋ ಒಂದು ವೈರಲ್ ಆಗಿದೆ. ಫೋಟೋದಲ್ಲಿ ಆಲಿಯಾಗೆ ಅಂಟಿ ಕುಳಿತಿರುವ ರಣಬೀರ್, ಆಲಿಯಾ ಕತ್ತಿನ ಮೇಲೆ ಕೈ ಹಾಕಿ ಕುಳಿತಿದ್ದಾನೆ. ಈ ಫೋಟೋ ನೋಡಿದ್ರೆ ಆಲಿಯಾ-ರಣಬೀರ್ ಮತ್ತಷ್ಟು ಆಪ್ತರಾಗಿದ್ದಾರೆಂಬುದು ಸತ್ಯವಾಗ್ತಿದೆ.

ಆಲಿಯಾ ಹಾಗೂ ರಣಬೀರ್ ಮೊದಲ ಬಾರಿ ಬ್ರಹ್ಮಾಸ್ತ್ರ ಚಿತ್ರದ ಮೂಲಕ ದೊಡ್ಡ ಪರದೆ ಮೇಲೆ ಒಟ್ಟಿಗೆ ಮಿಂಚಲಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ವೇಳೆಯೇ ಆಪ್ತರಾಗಿರುವ ಆಲಿಯಾ-ರಣಬೀರ್ ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...