alex Certify
ಕನ್ನಡ ದುನಿಯಾ       Mobile App
       

Kannada Duniya

ಛಾಯಾಗ್ರಾಹಕನ ವಿರುದ್ದ ಸಿಟ್ಟಿಗೆದ್ದ ರಣಬೀರ್ ಮಾಡಿದ್ದೇನು..?

ranbir-angryಬಾಲಿವುಡ್ ನ ಚಾಕೋಲೆಟ್ ಬಾಯ್ ರಣಬೀರ್ ಕಪೂರ್ ತನ್ನ ಬಹುಕಾಲದ ಗೆಳತಿ ಕತ್ರೀನಾ ಕೈಫ್ ಜೊತೆ ಸಂಬಂಧ ಕಡಿದುಕೊಂಡ ಬಳಿಕ ಅವರ ಪ್ರತಿ ನಡೆಯನ್ನೂ ಮಾಧ್ಯಮ ಛಾಯಾಗ್ರಾಹಕರು ಸೆರೆ ಹಿಡಿಯುತ್ತಿರುವುದಕ್ಕೆ ಗರಂ ಆಗಿದ್ದಾರೆ.

ಈ ಹಿಂದೆಯೇ ಮಾಧ್ಯಮ ಛಾಯಾಗ್ರಾಹಕರಿಗೆ ಮನವಿ ಮಾಡಿದ್ದ ರಣಬೀರ್, ದಯವಿಟ್ಟು ನಾನು ಹೋದಲೆಲ್ಲಾ ನನ್ನನ್ನು ಹಿಂಬಾಲಿಸಬೇಡಿ. ನನಗೂ ವೈಯಕ್ತಿಕ ಬದುಕಿದೆ. ನಮ್ಮ ಕುಟುಂಬದ ಫ್ಯಾಮಿಲಿ ಡಾಕ್ಟರ್ ನಿವಾಸದ ಬಳಿಯೂ ಛಾಯಾಗ್ರಾಹಕರು ಕಾದು ಕುಳಿತಿರುವುದು ನನ್ನ ಗಮನಕ್ಕೆ ಬಂದಿದೆ. ಹಾಗೇ ಮಾಡಬೇಡಿ ಎಂದಿದ್ದರು.

ಇತ್ತೀಚೆಗೆ ರಣಬೀರ್ ತಮ್ಮ ಗೆಳೆಯ ಅಯಾನ್ ಮುಖರ್ಜಿ ಮನೆಗೆ ಹೊರಟಿದ್ದಾರೆ. ಆಗಲೂ ಮಾಧ್ಯಮ ಛಾಯಾಗ್ರಾಹಕನೊಬ್ಬ ತಮ್ಮ ಬೆನ್ನು ಬಿದ್ದಿರುವುದನ್ನು ಕಂಡು ರಣಬೀರ್ ಕೋಪ ನೆತ್ತಿಗೇರಿದೆ. ತಮ್ಮ ಕಾರು ನಿಲ್ಲಿಸಿ ಆತನಿಗೆ ಬಾಯಿಗೆ ಬಂದಂತೆ ಬೈದಿದ್ದಲ್ಲದೇ ಆತನ ಮೊಬೈಲ್ ಫೋನ್ ಕಿತ್ತುಕೊಂಡು ಸ್ನೇಹಿತನ ಮನೆಗೆ ಹೋಗಿದ್ದಾರೆ. ಬೆಳಗಿನ ಜಾವ 3-30 ರವರೆಗೂ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಹೊರಗೆ ಬಂದು ನೋಡಿದಾಗ ಮಾಧ್ಯಮ ಛಾಯಾಗ್ರಾಹಕ ಕಾದು ಕುಳಿತಿರುವುದು ಕಂಡು ಬಂದಿದೆ. ಆತನನ್ನು ಬಳಿಗೆ ಕರೆಸಿಕೊಂಡ ರಣಬೀರ್, ಇನ್ನು ಮುಂದೆ ಹೀಗೆ ಮಾಡದಂತೆ ತಾಕೀತು ಮಾಡಿ ಮೊಬೈಲ್ ಫೋನ್ ವಾಪಾಸ್ ನೀಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...