alex Certify
ಕನ್ನಡ ದುನಿಯಾ       Mobile App
       

Kannada Duniya

ಅವಳನ್ ಬಿಟ್ ಇವಳನ್ ಬಿಟ್ ಅವರ್ಯಾರು?

download

ಸದ್ಯ ಬಾಲಿವುಡ್ ನಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಾ ಇರೋದು ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಬ್ರೇಕ್ ಅಪ್. ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಜೋಡಿ ಬೇರೆಯಾಗೋಕೆ ಕಾರಣ ಏನು ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಾ ಇದೆ.

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇಬ್ಬರ ಮಧ್ಯೆ ಬಂದವಳು ಎಂಬ ಸುದ್ದಿ ಇತ್ತು. ದೀಪಿಕಾ ಜೊತೆ ರಣಬೀರ್ ‘ತಮಾಷಾ’ ಚಿತ್ರ ಮಾಡಿದ್ದಲ್ಲದೇ, ಇಬ್ಬರು ಪ್ರಮೋಷನ್ ಗಾಗಿ ಸಿಕ್ಕಾಪಟ್ಟೆ ತಿರುಗಾಡಿದ್ದರು. ಇದರಿಂದ ಕತ್ರಿನಾ ಮುನಿಸಿಕೊಂಡಿದ್ದಳು. ಇದೇ ಜಗಳ ಇಬ್ಬರ ಇಬ್ಭಾಗಕ್ಕೆ ಕಾರಣವಾಯ್ತು ಎನ್ನಲಾಗ್ತಾ ಇತ್ತು.ನಂತ್ರ ಎಂಟ್ರಿ ಕೊಟ್ಟಿದ್ದು ದಬಾಂಗ್ ಹುಡುಗ ಸಲ್ಮಾನ್ ಖಾನ್. ಸಲ್ಲು ಜೊತೆ ಕತ್ರಿನಾ ವೇದಿಕೆಯೊಂದನ್ನು ಹಂಚಿಕೊಳ್ಳೋಕೆ ಮುಂದಾಗಿದ್ಲಂತೆ. ಇದು ರಣಬೀರ್ ಗೆ ಇಷ್ಟ ಇರಲಿಲ್ಲವಂತೆ. ನಾ ಕೊಡೆ, ನೀ ಬಿಡೆ ಜಗಳ ತಾರಕಕ್ಕೇರಿ ರಣಬೀರ್ ಅಪಾರ್ಟ್ ಮೆಂಟ್ ಬಿಟ್ಟು ಅಪ್ಪ-ಅಮ್ಮನ ಜೊತೆ ಉಳಿದುಕೊಂಡನಂತೆ ಅಂತಾ ಬಾಲಿವುಡ್ ಮಂದಿ ಮಾತಾಡಿಕೊಂಡ್ರು.ranbir-alia-katrina

ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ರಣಬೀರ್, ಕತ್ರಿನಾ ಮಧ್ಯೆ ಹಳೆ ಗೆಳೆಯರಲ್ಲ, ಹೊಸ ಗೆಳತಿ ಎಂಟ್ರಿ ಕೊಟ್ಟಿದ್ದಾಳೆ. ಯಸ್ ಆಲಿಯಾ ಭಟ್ ಹಾಗೂ ರಣಬೀರ್ ನಡುವೆ ಏನೋ ಇದೆ ಎಂಬ ಸಂಶಯ ಕತ್ರಿನಾಳದ್ದು. ನಿರ್ದೇಶಕ ಇಮ್ತಿಯಾಜ್ ಅಲಿ ಕೊಟ್ಟ ಪಾರ್ಟಿಯಲ್ಲಿ ಇಬ್ಬರು ಜೊತೆ ಜೊತೆಗೆ ಕಾಣಿಸಿಕೊಂಡಿದ್ದಲ್ಲದೆ, ಸಾಕಷ್ಟು ಹೊತ್ತು ಮಾತುಕತೆ ನಡೆಸಿದ್ದಾರಂತೆ. ಇಷ್ಟೆ ಅಲ್ಲ ಇಮ್ತಿಯಾಜ್ ಅಲಿ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ. ಇದೇ ಇಬ್ಬರ ನಡುವೆ ಬ್ರೇಕ್ ಅಪ್ ಆಗಲು ಕಾರಣ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...