alex Certify
ಕನ್ನಡ ದುನಿಯಾ       Mobile App
       

Kannada Duniya

ವಧು ಪರೀಕ್ಷೆಯಲ್ಲಿ ಆಲಿಯಾ ಪಾಸ್: ಮದುವೆ ಯಾವಾಗ ಗೊತ್ತಾ?

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ನಡುವೆ ಪ್ರೀತಿ ಚಿಗುರಿದೆ ಎಂಬ ಸಂಗತಿ ಅನೇಕ ದಿನಗಳಿಂದ ಸುದ್ದಿಯಲ್ಲಿದೆ. ಇಬ್ರೂ ಅನೇಕ ಸಮಯ ಒಟ್ಟಿಗೆ ಕಳೆದಿದ್ದಾರೆ. ಇದ್ರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆಂಬ ಸುದ್ದಿ ಚರ್ಚೆಯಲ್ಲಿದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಂದಿನ ವರ್ಷ ಮದುವೆಯಾಗ್ತಾರಂತೆ. ಹೀಗಂತ ಕಪೂರ್ ಕುಟುಂಬದ ಆಪ್ತ ಸ್ನೇಹಿತರೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ವರದಿ ಪ್ರಕಾರ, ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಹಾಗೂ ತಾಯಿ ನೀತುಗೆ ಆಲಿಯಾ ಇಷ್ಟವಾಗಿದ್ದಾಳಂತೆ.

ರಣಬೀರ್ ಈ ಹಿಂದಿನ ಗರ್ಲ್ ಫ್ರೆಂಡ್ಸ್ ಬಗ್ಗೆ ರಿಷಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ನೀತುಗೆ ಕತ್ರಿನಾ ಹಾಗೂ ದೀಪಿಕಾ ಅಷ್ಟು ಇಷ್ಟವಾಗಿರಲಿಲ್ಲ. ಆದ್ರೆ ಆಲಿಯಾ ತುಂಬಾ ಇಷ್ಟವಾಗಿದ್ದಾಳಂತೆ. ಹಾಗಾಗಿ ಇಬ್ಬರ ಮದುವೆಗೆ ಕುಟುಂಬಸ್ಥರು ಯೋಚನೆ ಮಾಡ್ತಿದ್ದಾರಂತೆ.

ರಣಬೀರ್ ಮದುವೆ ಬಗ್ಗೆ ಪತ್ರಿಕ್ರಿಯೆ ನೀಡಿದ ರಿಷಿ ಕಪೂರ್, ಮಗನಿಗೆ ಇದು ಮದುವೆಯಾಗಲು ಸರಿಯಾದ ವಯಸ್ಸು ಎಂದಿದ್ದಾರೆ. 27ನೇ ವರ್ಷದಲ್ಲಿಯೇ ನಾನು ಮದುವೆಯಾಗಿದ್ದೆ. ಮಗನಿಗೆ ಈಗ 35 ವರ್ಷ. ಈಗ ಆತ ಮದುವೆಯಾಗುವುದು ಬೆಸ್ಟ್. ಆತನಿಗೆ ಇಷ್ಟವಾಗುವ ಹುಡುಗಿ ಜೊತೆ ಮದುವೆಯಾಗಬಹುದೆಂದು ರಿಷಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...