alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಿಯಾ ಸಂಬಂಧದ ಬಗ್ಗೆ ಮೌನ ಮುರಿದ ರಣಬೀರ್

ಬಾಲಿವುಡ್ ನಟ ರಣಬೀರ್ ಕಪೂರ್ ಸಂಜು ಚಿತ್ರದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆಲ್ಲಲು ಯಶಸ್ವಿಯಾಗಿದ್ದಾರೆ. ಸಂಜು ತೆರೆ ಮೇಲೆ ಬರ್ತಿದ್ದಂತೆ ರಣಬೀರ್ ಇನ್ನೊಂದು ವಿಚಾರಕ್ಕೂ ಸುದ್ದಿಗೆ ಬರ್ತಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಮಧ್ಯೆ ಕುಚ್ ಕುಚ್ ಶುರುವಾಗಿದೆ ಎಂಬ ಸಂಗತಿ ಅನೇಕ ದಿನಗಳಿಂದ ಸದ್ದು ಮಾಡ್ತಿದೆ.

ರಣಬೀರ್ ಹಾಗೂ ಆಲಿಯಾ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ. ಸೋನಂ ಕಪೂರ್ ಮದುವೆಯಿಂದ ಹಿಡಿದು ಅನೇಕ ಪಾರ್ಟಿಗಳಲ್ಲಿ ಇಬ್ಬರೂ ಕೈ ಕೈ ಹಿಡಿದು ಓಡಾಡಿದ್ದಾರೆ. ಆಲಿಯಾ ಮನೆಗೆ ಹೋಗಿದ್ದ ರಣಬೀರ್ ಇಬ್ಬರು ಶೀಘ್ರವೇ ಮದುವೆಯಾಗ್ತಾರೆಂಬ ಸುದ್ದಿಗೆ ವೇದಿಕೆ ಒದಗಿಸಿಕೊಟ್ಟಿದ್ದರು.

ಸಂಬಂಧದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೆಲ ದಿನಗಳ ಹಿಂದೆಯೇ ಆಲಿಯಾ ಉತ್ತರ ನೀಡಿದ್ದಾಳೆ. ವದಂತಿಗಳಿಗೆ ಕಿವಿಯೊಡ್ಡುವುದಿಲ್ಲ. ವದಂತಿಗಳಿರುವುದು ಉತ್ತರ ನೀಡಲಲ್ಲ ಎಂದಿದ್ದಳು. ಈಗ ರಣಬೀರ್ ಕಪೂರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾನೆ. ನಮ್ಮಿಬ್ಬರ ಮಧ್ಯೆ ಏನಿದೆ ಎಂಬುದು ಎಲ್ಲರಿಗೂ ಗೊತ್ತು. ಇದನ್ನು ಮುಚ್ಚಿಡುವ ಅಗತ್ಯವಿಲ್ಲ. ಇದೊಂದು ಜೀವನದ ಸುಂದರ, ಸಕಾರಾತ್ಮಕ ಹಾಗೂ  ಸಂತೋಷದ ಪುಟವಾಗಿದೆ. ವೈಯಕ್ತಿಕ ವಿಚಾರಕ್ಕೆ ಹೆಚ್ಚು ಗಮನ ನೀಡಿದ್ರೆ ವೃತ್ತಿ ಜೀವನಕ್ಕೆ ಹಿನ್ನಡೆಯಾಗುತ್ತದೆ ಎಂದು ರಣಬೀರ್ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...