alex Certify
ಕನ್ನಡ ದುನಿಯಾ       Mobile App
       

Kannada Duniya

ಜಗ್ಗೇಶ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಲ್ಲ: ರಮ್ಯಾ

ಬೆಂಗಳೂರು: POT ಪದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪ್ರಧಾನಿಯವರು ನೀಡಿದ್ದ TOP ಹೇಳಿಕೆಯನ್ನೇ ನಾನು ಹೇಳಿದ್ದೇನೆ. ಅದಕ್ಕೆ ವಿಶೇಷ ಅರ್ಥವೇನೂ ಇಲ್ಲ ಎಂದು ಮಾಜಿ ಸಂಸದೆ, ಎ.ಐ.ಸಿ.ಸಿ. ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಹೇಳಿದ್ದಾರೆ.

ಕೆ.ಪಿ.ಸಿ.ಸಿ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಹೇಳಿದ್ದ ಅರ್ಥದಲ್ಲೇ ನಾನು ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಫೇಕ್ ಅಕೌಂಟ್ ಬಗ್ಗೆ ನಾನು ಪಾಠ ಮಾಡಿಲ್ಲ. ಫೇಕ್ ಅಕೌಂಟ್ ಕ್ರಿಯೇಟ್ ಮಾಡುವಂತೆ ನಾನು ಹೇಳಿಲ್ಲ. ನನ್ನ ಹೇಳಿಕೆಯ ವಿಡಿಯೋ ತಿರುಚಲಾಗಿದೆ. ಪಕ್ಷಕ್ಕಾಗಿ 1 ಟ್ವಿಟರ್ ಅಕೌಂಟ್ ಇರಲಿ, ವೈಯಕ್ತಿಕವಾಗಿ ಕಾರ್ಯಕರ್ತರು 1 ಟ್ವಿಟರ್ ಅಕೌಂಟ್ ಹೊಂದುವಂತೆ ಹೇಳಿದ್ದೇನೆ. ಫೇಕ್ ಅಕೌಂಟ್ ಹೊಂದುವಂತೆ ನಾನು ಹೇಳುವುದಿಲ್ಲ. ಫೇಕ್ ಅಕೌಂಟ್ ಗೂ, ಮಲ್ಟಿಪಲ್ ಅಕೌಂಟ್ ಗೂ ತುಂಬಾ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.

ತಮ್ಮ POT ಹೇಳಿಕೆ ಬಗ್ಗೆ ನಟ ಜಗ್ಗೇಶ್ ನೀಡಿರುವ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ ಮಾತನಾಡಲು ನಿರಾಕರಿಸಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ, ಅವರು ದೊಡ್ಡವರು, ಅವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...