alex Certify
ಕನ್ನಡ ದುನಿಯಾ       Mobile App
       

Kannada Duniya

ರಮ್ಯಾ ವಿರುದ್ಧ ಮುಂದುವರೆದ ಜಗ್ಗೇಶ್ ಟ್ವೀಟ್ ವಾರ್

ಮಾಜಿ ಸಂಸದೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹಾಗೂ ಸಂವಹನ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ನಟ ಜಗ್ಗೇಶ್ ಟ್ವೀಟ್ ವಾರ್ ಮುಂದುವರೆಸಿದ್ದಾರೆ.

ಒಂದೇ ಹೆಸರಲ್ಲಿ 2 -3 ಖಾತೆಗಳನ್ನು ಹೊಂದಬಹುದೆಂದು ರಮ್ಯಾ ಪಕ್ಷದ ಕಾರ್ಯಕರ್ತರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ್ದು, ಇದಕ್ಕೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ರಮ್ಯಾ ಹೆಸರು ಹೇಳದೇ ಟಾಂಗ್ ಕೊಟ್ಟಿರುವ ಜಗ್ಗೇಶ್, ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ! ಕ್ಯಾಚ್ ಆಫೀಸರ್! ಏನ್ ಕರ್ಮ ರೀ, ಅದಕ್ಕೆ ಅವತ್ತು ಅನೇಕ ಕುಟುಂಬಗಳು ಫೇಕ್ ವರದಕ್ಷಿಣೆ ಕೇಸ್ ನಿಂದ ಅಮಾಯಕ ಗಂಡ, ತಂದೆ–ತಾಯಿ ಜೈಲು ಭಾಗ್ಯ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

‘ಕಣ್ಣಗಲಿಸಿ ನೋಡಿ ಫೇಕ್ ಅಕೌಂಟ್ ಬಗ್ಗೆ ಪಾಠ ಕಲಿಸುತ್ತಿರುವ ಸಭ್ಯಸ್ಥೆ. ಭಾರತದ ನಾಗರಿಕ ಕುಲವಂತರು ಇವಳ ಪಾಠ ಕಲಿತು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಾಂತಿ ಮಾಡುತ್ತಿರುವವರು ಇವರೇ. ಹೇಗೆ ತಯಾರು ಮಾಡ್ತಾರೆ ನೋಡಿ ಅರ್ಧಬೆಂದ ಮಡಿಕೆಗಳ!’

‘ಇದು ಫೇಕ್ ಗಳನ್ನು ತಯಾರಿಸಿ ವೈರಲ್ ಮಾಡಿ ಬದುಕೋ ಫೇಕ್ ಗಳು!. ಇನ್ಮುಂದೆ ನಿಮ್ಮ ಆಟ ಬಂದ್! ಮಹಾಜನತೆಗೆ ಅರಿವಾಯಿತು ಫೇಕ್ ನಾಟಕ ಕಂಪನಿ’ ಎಂದು ಜಗ್ಗೇಶ್ ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...