alex Certify
ಕನ್ನಡ ದುನಿಯಾ       Mobile App
       

Kannada Duniya

ಧಮ್ ಮಾರೋ ಧಮ್… ಮೇಲೆ ಸಿಸಿಬಿ ಕಣ್ಣು

ಮಾದಕ ವಸ್ತುಗಳ ಸೇವನೆ ನಶೆಗೆ ಇನ್ನಷ್ಟು ಕಿಕ್ಕು ಬರಿಸುವಂತ ಹಾಡುಗಳ ಕಡಿವಾಣಕ್ಕೆ ಸಿಸಿಬಿ ಪೊಲೀಸರು ಮುಂದಾಗಿದ್ದು, ಇಂಥಹ ನಶೆಯ ಹಾಡುಗಳ ಮೂಲಕ ಮಾದಕ ವಸ್ತುಗಳ ವ್ಯಸನಕ್ಕೆ ಇನ್ನಷ್ಟು ಪ್ರಚೋದನೆ ನೀಡುವ ಚಿತ್ರದ ಹಾಡುಗಳ ಮೇಲೆ ಸಿಸಿಬಿ ಕಣ್ಣು ಬಿದ್ದಿದೆ.

ಈ ನಿಟ್ಟಿನಲ್ಲಿ ರ‍್ಯಾಂಬೊ-2 ಚಿತ್ರದ ದಮ್ಮಾರೋ.. ದಮ್ಮಾರೋ… ಹಾಡಿಗಾಗಿ ಸಮನ್ಸ್​ ನೀಡಲು ಸಿಸಿಬಿ ಮುಂದಾಗಿದೆ. ಚಂದನ್​ ಶೆಟ್ಟಿಯವರ ಗಾಂಜಾ ಕಿಕ್​ ಹಾಡಿಗೆ ಈಗಾಗಲೇ ಸಮನ್ಸ್​ ನೀಡಲಾಗಿದ್ದು, ಇದರ ಬೆನ್ನಲ್ಲೇ ಈಗ ರ‍್ಯಾಂಬೊ-2 ಚಿತ್ರಕ್ಕೆ ಸಮನ್ಸ್​ ನೀಡಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕಿ ಅಧಿತಿ ಸಾಗರ್​ಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ. ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಮೂಲಕ ಮಾದಕ ವಸ್ತು ಸೇವನೆಯನ್ನು ವೈಭವೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...