alex Certify
ಕನ್ನಡ ದುನಿಯಾ       Mobile App
       

Kannada Duniya

OMG..! ಪಡ್ಡೆಗಳ ಬೆವರಿಳಿಸ್ತಿದೆ ಹಾಟ್ ಪೋಸ್ಟರ್

Capture29-775x400

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾಗಿಲ್ಲ. ಸೆಕ್ಸ್ ಹಾಗೂ ಸಸ್ಪೆನ್ಸ್ ಗೆ ಅವರು ಫೇಮಸ್ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಮತ್ತೆ ಚರ್ಚೆಯಲ್ಲಿದ್ದಾರೆ ರಾಮ್ ಗೋಪಾಲ್ ವರ್ಮಾ. ಅವರು ಅಪ್ ಲೋಡ್ ಮಾಡಿರುವ ಫೋಟೋ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಫೋಸ್ಟರ್ ನೋಡಿಯೇ ಬೆವರುತ್ತಿದ್ದಾರೆ ಪಡ್ಡೆಗಳು.

ಅದು ‘ಸಿಂಗಲ್ ಎಕ್ಸ್’ ಚಿತ್ರದ ಫೋಟೋ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮೊದಲ ಕಿರುಚಿತ್ರ ‘ಸಿಂಗಲ್ ಎಕ್ಸ್’. ಒಂದು ಫೋಟೋವನ್ನು ವಿವಿಧ ಎಂಗಲ್ ನಲ್ಲಿ ಅಪ್ ಲೋಡ್ ಮಾಡಿರುವ ವರ್ಮಾ ಇದರ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ.

ವರ್ಮಾ ಅತಿ ಶೀಘ್ರದಲ್ಲಿ ಆನ್ಲೈನ್ ಥಿಯೇಟರ್ ಶುರುಮಾಡಲಿದ್ದಾರಂತೆ. ಥಿಯೇಟರ್ ನ (ಆರ್ ಜಿ ವಿ) ಆರಂಭ ‘ಸಿಂಗಲ್ ಎಕ್ಸ್’ ಕಿರುಚಿತ್ರದ ಮೂಲಕವಾಗಲಿದೆಯಂತೆ. ಈ ಥಿಯೇಟರಿನಲ್ಲಿ ಕೇವಲ ವರ್ಮಾ ಚಿತ್ರವೊಂದೇ ಅಲ್ಲ ಉಳಿದವರ ಚಿತ್ರ ಬಿಡುಗಡೆಗೂ ಅವಕಾಶವಿದೆಯಂತೆ. ರೋಮ್ಯಾಂಟಿಕ್ ಕಾಮಿಡಿ ಅಥವಾ ಸೆಕ್ಸ್ ಕಾಮಿಡಿ ಚಿತ್ರವನ್ನು ಅವರು ಈ ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಿಲ್ಲವಂತೆ. ಅವರು ಸೆಕ್ಸ್ ಹಾಗೂ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇದಕ್ಕೆ ಕಾರಣವಂತೆ.

ಹಾಗೇ ಆರ್ ಜಿ ವಿ ಟಾಕೀಸ್ ನಲ್ಲಿ ಕ್ರೀಡಾ ಚಿತ್ರವನ್ನು ಕೂಡ ರಿಲೀಸ್ ಮಾಡುವುದಿಲ್ಲವಂತೆ. ದೇವರ ಬಗ್ಗೆ ಕೂಡ ನಂಬಿಕೆ ಇಲ್ಲದ ವರ್ಮಾ, ಆ ಚಿತ್ರಗಳಿಗೂ ಅವಕಾಶ ನೀಡುವುದಿಲ್ಲವಂತೆ. ಆರ್ ಜಿ ವಿ ಯಲ್ಲಿ ಕಾಮಪ್ರಚೋದಕ, ಅಪರಾಧ, ಭಯಾನಕ ಚಿತ್ರಗಳನ್ನು ಅಭಿಮಾನಿಗಳು ನೋಡಬಹುದಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...