alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದ ಸುಳಿಯಲ್ಲಿ RGV ಯ ‘ಗಾಡ್, ಸೆಕ್ಸ್ & ಟ್ರೂತ್’

ರಾಮ್ ಗೋಪಾಲ್ ವರ್ಮಾ ಅವರ ಮತ್ತೊಂದು ಹೆಸರೇ ವಿವಾದ. ಯಾಕಂದ್ರೆ ಈ ನಿರ್ದೇಶಕ ಯಾವಾಗ್ಲೂ ಸುದ್ದಿಯಾಗೋದು ವಿವಾದಗಳಿಂದ. ಆರ್ ಜಿ ವಿ ನಿರ್ದೇಶನದ ‘ಗಾಡ್, ಸೆಕ್ಸ್ & ಟ್ರೂತ್’ ಎಂಬ ವಿವಾದಾತ್ಮಕ ಚಿತ್ರ ಬಿಡುಗಡೆಯಾಗುವ ಒಂದು ದಿನ ಮೊದಲೇ ಹೈದ್ರಾಬಾದ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರೊಬ್ಬರು ವರ್ಮಾ ವಿರುದ್ಧ ದೂರು ನೀಡಿದ್ದರು. ‘ಗಾಡ್, ಸೆಕ್ಸ್ & ಟ್ರೂತ್’ ಚಿತ್ರ ಅಮೆರಿಕದ ಅಡಲ್ಟ್ ಫಿಲ್ಮ್ ಸ್ಟಾರ್ ಮಿಯಾ ಮಾಲ್ಕೋವಾ ಅವರ ಕುರಿತಾಗಿದೆ. ಈ ಚಿತ್ರ ಅಶ್ಲೀಲತೆಯನ್ನು ಹೊಂದಿದೆ ಅಂತಾ ಸಾಮಾಜಿಕ ಕಾರ್ಯಕರ್ತ ದೂರು ನೀಡಿದ್ದರು.

ವರ್ಮಾ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿರುವ ಚಿತ್ರದ ಅಶ್ಲೀಲ ಫೋಟೋಗಳನ್ನು ಕೂಡ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿತ್ರವನ್ನು ವಿರೋಧಿಸಿದ್ದಕ್ಕೆ ವರ್ಮಾ ಸಾಮಾಜಿಕ ಕಾರ್ಯಕರ್ತನ ಮೇಲೆ ಕೆಟ್ಟದಾಗಿ ಕಮೆಂಟ್ ಮಾಡಿದ್ದು, ಸೆಕ್ಷನ್ 506 ಮತ್ತು 509 ಅಡಿಯಲ್ಲಿ ಕೂಡ ಕೇಸ್ ದಾಖಲಾಗಿದೆ.

ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು ಆನ್ ಲೈನ್ ನಲ್ಲಿ ರಿಲೀಸ್ ಮಾಡಲು ಹೊರಟಿದ್ದಾರೆ. ಅದನ್ನು ನಿರ್ಬಂಧಿಸುವಂತೆ ಹೈದ್ರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಪ್ರತಿಭಟನೆಗಳು ಕೂಡ ನಡೆದಿವೆ. ಈ ಚಿತ್ರ ಕ್ರಾಂತಿಕಾರಿ ಲೈಂಗಿಕ ತತ್ವಶಾಸ್ತ್ರವನ್ನು ಹೊಂದಿದೆ ಅಂತಾ ವರ್ಮಾ ಹೇಳಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...