alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲಿ ಬ್ಯುಸಿಯಾದ ರಕ್ಷಿತ್ ಶೆಟ್ಟಿ

raxittt

‘ಕಿರಿಕ್ ಪಾರ್ಟಿ’ ಬಿಡುಗಡೆಯಾದಲ್ಲೆಲ್ಲಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ತಂಡದ ಖುಷಿಯನ್ನು ಹೆಚ್ಚಿಸಿದೆ.

ಇದೇ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಮದುವೆ ಕಾರಣದಿಂದ ಬಿಡುವಿಲ್ಲದಂತಾಗಿದ್ದಾರೆ. ಅಂದಹಾಗೇ ಮದುವೆ ರಕ್ಷಿತ್ ಅವರದ್ದಲ್ಲ. ಬದಲಿಗೆ ಅವರ ಸಿನಿಮಾಗಳ ನಿರ್ದೇಶಕರ ಮದುವೆ.

ರಕ್ಷಿತ್ ಅವರ ಸಿನಿಮಾ ನಿರ್ದೇಶಿಸಿದ್ದ ಮೂವರು ನಿರ್ದೇಶಕರ ಮದುವೆ ಫೆಬ್ರವರಿಯಲ್ಲಿ ನಡೆದಿದ್ದು, ವಿವಿಧೆಡೆ ನಡೆದ ಮದುವೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.

‘ರಿಕ್ಕಿ’ ಮತ್ತು ‘ಕಿರಿಕ್ ಪಾರ್ಟಿ’ ನಿರ್ದೇಶನ ಮಾಡಿದ್ದ ರಿಶಬ್ ಶೆಟ್ಟಿ ಮದುವೆ ಇತ್ತೀಚೆಗಷ್ಟೇ ನಡೆಯಿತು. ಇದರೊಂದಿಗೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನಿರ್ದೇಶಕ ಹೇಮಂತ್, ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ನಿರ್ದೇಶಕ ಸುನಿ ಅವರ ಮದುವೆ ಕೂಡ ನಡೆದಿದ್ದು, ರಕ್ಷಿತ್ ಶೆಟ್ಟಿ ಮೂರೂ ಮದುವೆಗಳಲ್ಲಿ ಪಾಲ್ಗೊಂಡು, ತಮ್ಮ ಗೆಳೆಯರಾದ ಚಿತ್ರ ನಿರ್ದೇಶಕರಿಗೆ ಶುಭ ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...