alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಿತ್ –ರಶ್ಮಿಕಾ ನಿಶ್ಚಿತಾರ್ಥಕ್ಕೆ ಸಿದ್ಧತೆ

rakshit-sh

‘ಕಿರಿಕ್ ಪಾರ್ಟಿ’ಯ ಯಶಸ್ವಿ ಜೋಡಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಜ ಜೀವನದಲ್ಲಿಯೂ ಜೊತೆಯಾಗಲಿದ್ದು, ಜುಲೈ 3 ರಂದು ಉಂಗುರ ಬದಲಿಸಿಕೊಳ್ಳಲಿದ್ದಾರೆ.

ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಕುಟುಂಬದವರು, ಬಂಧುಗಳು, ಆತ್ಮೀಯರ ಸಮ್ಮುಖದಲ್ಲಿ ಕೊಡಗಿನ ಶೈಲಿಯಲ್ಲಿ ನಿಶ್ಚಿತಾರ್ಥ ನೆರವೇರಲಿದೆ.

ಡಿಸೈನರ್ ಶ್ರದ್ಧಾ ಪೊನ್ನಪ್ಪ ಡಿಸೈನ್ ಮಾಡಿರುವ ಗೌನ್ ನಲ್ಲಿ ರಶ್ಮಿಕಾ ಮಂದಣ್ಣ ಕಂಗೊಳಿಸಲಿದ್ದು, ತಾವೇ ಡಿಸೈನ್ ಮಾಡಿದ ಸೂಟ್ ನಲ್ಲಿ ರಕ್ಷಿತ್ ಮಿಂಚಲಿದ್ದಾರೆ.

ಇನ್ನು ವಿವೇಕ್ ಸೋಮಯ್ಯ ತಂಡದಿಂದ ಡಿ.ಜೆ. ಡ್ಯಾನ್ಸ್ ಇರುತ್ತದೆ. ಚಿತ್ರ ಅಯ್ಯಪ್ಪ ಹಾಲ್ ಡೆಕೊರೇಷನ್ ಮಾಡಲಿದ್ದಾರೆ. ಈಗಾಗಲೇ ಸಿದ್ಧತೆಗಳು ನಡೆದಿವೆ.

ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಲಿರುವ ರಕ್ಷಿತ್ ಶೆಟ್ಟಿ ಅಲ್ಲಿಂದ ವಿರಾಜಪೇಟೆಗೆ ಆಗಮಿಸಲಿದ್ದಾರೆ. ನಿಶ್ಚಿತಾರ್ಥ ನೆರವೇರಿದ ಬಳಿಕ ಮದುವೆ ಡೇಟ್ ಫಿಕ್ಸ್ ಆಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...