alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ನಟ ರಕ್ಷಿತ್ ಶೆಟ್ಟಿ

raxith

‘ಬಿಗ್ ಬಾಸ್’ 10 ವಾರ ಪೂರೈಸಿದ ಬಳಿಕ, ಮನೆಗೆ ವಿಶೇಷ ಅತಿಥಿಗಳು ಎಂಟ್ರಿ ಕೊಟ್ಟಿದ್ದಾರೆ. ‘ಸೂಪರ್ ಸಂಡೇ ವಿತ್ ಸುದೀಪ’ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ‘ಕಿರಿಕ್ ಪಾರ್ಟಿ’ ಚಿತ್ರದ ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

‘ಕಿರಿಕ್ ಪಾರ್ಟಿ’ ಚಿತ್ರದ ಹಾಡು ಕೇಳಿ ಬಂದಿದ್ದು, ಮಲಗುವ ಧಾವಂತದಲ್ಲಿದ್ದ ಮನೆಯ ಸದಸ್ಯರೆಲ್ಲಾ ಯಾರು ಬರಬಹುದೆಂದು ಕುತೂಹಲದಿಂದ ಕಾಯುತ್ತಿರುವಾಗಲೇ ರಕ್ಷಿತ್ ಹಾಗೂ ರಿಶಬ್ ಎಂಟ್ರಿ ಕೊಟ್ಟಿದ್ದಾರೆ. ಮನೆಯ ಸದಸ್ಯರೊಂದಿಗೆ ಹರಟಿದ ಇಬ್ಬರೂ, ಹೊರಗೆ ನಡೆಯುತ್ತಿರುವ ಚರ್ಚೆ ಕುರಿತಾಗಿ ಮಾತಾಡಿದ್ದಾರೆ.

ರಿಶಬ್ ಶೆಟ್ಟಿ ಅವರಂತೂ ಜಗ್ಗೇಶ್ ಮತ್ತು ಸಾಯಿಕುಮಾರ್ ಸ್ಟೈಲ್ ನಲ್ಲಿ ಮಾತನಾಡಿದ್ದಲ್ಲದೇ, ಮಿಮಿಕ್ರಿ ಮಾಡಿ ರಂಜಿಸಿದ್ದಾರೆ. ಅವರು ಮನೆಯಿಂದ ಹೊರಗೆ ಹೋಗುತ್ತಾರೇನೋ ಎಂದು ಸದಸ್ಯರು ಕಾದು ನೋಡಿದ್ದಾರೆ.

ಆದರೆ ಇಬ್ಬರೂ ಉಳಿಯಲು ಬಂದಿದ್ದಾರೆ ಎಂಬುದು ಗೊತ್ತಾದ ಕೂಡಲೇ ಹೆಚ್ಚಿನ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅವರಿಬ್ಬರ ಲಗೇಜ್ ಚೆಕ್ ಮಾಡಿ ಕಡಿಮೆ ಬಟ್ಟೆ ತಂದಿದ್ದರಿಂದ ಉಳಿಯುವ ಚಾನ್ಸ್ ಇಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದಾರೆ.

ಇನ್ನು ಮನೆಯಲ್ಲಿರುವ ರೇಖಾ, ಕೀರ್ತಿ, ಮೋಹನ್, ಭುವನ್, ಮಾಳವಿಕಾ, ಕಾರುಣ್ಯ, ಪ್ರಥಮ್, ಸಂಜನಾ, ಶಾಲಿನಿ, ಶೀತಲ್ ಹೀಗೆ ಎಲ್ಲರೂ ಈ ವಾರ ನಾಮಿನೇಟ್ ಆಗಿದ್ದಾರೆ.

‘ಬಿಗ್ ಬಾಸ್’ ಮನೆಯ ಸದಸ್ಯರು ಒಬ್ಬರನ್ನೊಬ್ಬರು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಸಲು ಸ್ಥಾನಮಾನ ಚಟುವಟಿಕೆ ನೀಡಿದ್ದು, ಅದರಲ್ಲಿ 1 ರಿಂದ 10 ರ ವರೆಗಿನ ಸಂಖ್ಯೆಯ ಬಳಿ ಕೊಡಲಾದ ಪದವನ್ನು ಮಾನದಂಡವಾಗಿ ಅನುಸರಿಸಿ ತಮ್ಮ ಇಷ್ಟದ ಸದಸ್ಯರನ್ನು ಒಬ್ಬೊಬ್ಬರು ನಿಲ್ಲಿಸಬೇಕಿತ್ತು.

ಕಾರುಣ್ಯಗೆ ಎಂಟರ್ ಟೈನರ್ ಪದ ಬಂದರೆ, ಕೀರ್ತಿಗೆ ಕೃತಕ ಪದ ಬಂದಿತ್ತು ಅವರು 1 ರಿಂದ 10 ರವರೆಗಿನ ಸಂಖ್ಯೆಯ ಬಳಿ ಸದಸ್ಯರನ್ನು ನಿಲ್ಲಿಸಿ ಕಾರಣ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...