alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಕೆಲಸ ಮಾಡಿದ್ದಾರೆ ರಕ್ಷಿತ್ ಶೆಟ್ಟಿ

ಸ್ಯಾಂಡಲ್ ವುಡ್  ನಟ ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ’ ಯಶಸ್ಸಿನ ಬಳಿಕ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಲಾವಿದರು ಸಿನಿಮಾದಲ್ಲಿ ಮಾತ್ರವಲ್ಲದೇ, ಸಾಮಾಜಿಕ ಕಾರ್ಯಗಳ ಮೂಲಕವೂ ಇತ್ತೀಚೆಗೆ ಗಮನ ಸೆಳೆಯುತ್ತಿದ್ದಾರೆ.

ಅಂತಹವರ ಸಾಲಿಗೆ ಸೇರಿರುವ ನಟ ರಕ್ಷಿತ್ ಶೆಟ್ಟಿ ‘ನದಿ ಉಳಿಸಿ ಅಭಿಯಾನ’ಕ್ಕೆ(Rally For Rivers) ಕೈ ಜೋಡಿಸಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ಫೇಸ್ ಬುಕ್ ನಲ್ಲಿ ನದಿ ಉಳಿಸಬಹುದಾದ ಅಗತ್ಯತೆ ಬಗ್ಗೆ ಹೇಳಿಕೊಂಡಿದ್ದಾರೆ.

ದೇಶದ ಶೇ. 25 ರಷ್ಟು ಭೂ ಭಾಗ ಮರುಭೂಮಿಯಾಗಿ ಬದಲಾಗುತ್ತಿರುವುದು ನಿಮಗೆ ಗೊತ್ತೇ ಇದೆ. ನದಿ ಉಳಿಸುವ ಅಭಿಯಾನದಲ್ಲಿ ನೀವೂ ಭಾಗಿಯಾಗಿರಿ. ಹಾಗೆಯೇ 80009 80009 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. ನಾನೀಗಾಗಲೇ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...