alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರಿಕ್ ಜೋಡಿಯ ಎಂಗೇಜ್ಮೆಂಟ್ ಮುರಿದು ಬಿತ್ತಾ…?

ಕಳೆದ ತಿಂಗಳಷ್ಟೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್ ಬ್ರೇಕಪ್ ಸುದ್ದಿ ಓಡಾಡ್ತಿತ್ತು. ಆದ್ರೆ ಆ ಸುದ್ದಿ ಸುಳ್ಳು ಅಂತ ಖುದ್ದು ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಕ್ಲಾರಿಫಿಕೇಷನ್ ನೀಡಿತ್ತು. ಆದ್ರೆ ಈಗ ಇಬ್ಬರ ನಡುವಿನ ಲವ್ ಮತ್ತು ಎಂಗೇಜ್ಮೆಂಟ್ ಕೂಡ ಬ್ರೇಕಪ್ ಅಗಿದೆ. ರಕ್ಷಿತ್ ಮತ್ತು ರಶ್ಮಿಕಾ ಕುಟುಂಬದ ಹಿರಿಯರ ಸಮ್ಮುಖದಲ್ಲೇ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದಾರೆ ಅಂತ ಹೇಳಲಾಗ್ತಿದೆ.

ಹೊಂದಾಣಿಕೆಯ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕುಟುಂಬಗಳೇ ಎಂಗೇಜ್ಮೆಂಟ್ ಮುರಿದುಕೊಂಡಿದೆಯಂತೆ. ನಾನಾ ಕಾರಣಗಳಿಂದಾಗಿ ಎರಡೂ ಕುಟುಂಬಗಳು ಈ ಸಂಬಂಧವನ್ನು ಮುಂದುವರೆಸೋದು ಬೇಡ ಅನ್ನೋ ತೀರ್ಮಾನಕ್ಕೆ ಬಂದಿವೆಯಂತೆ. ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ, ಕೆರಿಯರ್ ನತ್ತ ಹೆಚ್ಚು ಗಮನ ಕೊಡಲು ಹೀಗೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ.

ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ಹೊರನಡೆದ ನಂತರದಲ್ಲಿ ಇಬ್ಬರ ನಡುವಿನ ಬ್ರೇಕಪ್ ಸುದ್ದಿ ಭಾಗಶಃ ನಿಜ ಇರಬಹುದು ಅನ್ನೋ ಅನುಮಾನ ಎಲ್ಲರಿಗೂ ಬಂದಿತ್ತು. ರಶ್ಮಿಕಾ ಕುಟುಂಬದ ಮೂಲಗಳು ಕೂಡ ಬ್ರೇಕಪ್ ವಿಚಾರ ಈಗ ನಿಜ ಅಂತ ಹೇಳ್ತಿವೆ. ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಲವ್ ಜರ್ನಿ ಶುರುವಾಗಿತ್ತು. 2017ರ ಜುಲೈ3 ರಂದು ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಎಂಗೇಜ್ಮೆಂಟ್ ಸಂಭ್ರಮವನ್ನು ಆಚರಿಸಿಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...