alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರಪ್ರದೇಶದಲ್ಲಿ ಮಾಯಾವತಿ ವಿರುದ್ಧ ರಾಖಿ ಸಾವಂತ್ ಕಣಕ್ಕೆ

rakhi

ಐಟಂ ಗರ್ಲ್ ರಾಖಿ ಸಾವಂತ್ ಮತ್ತೊಮ್ಮೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಈ ಬಾರಿ ರಾಖಿ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ವಿರುದ್ಧ ಕಣಕ್ಕಿಳಿಯಲಿದ್ದಾರಂತೆ.

ಕೇಂದ್ರ ಸಚಿವ ರಾಮದಾಸ್ ಅಥವಲೆ ಹಾಗೂ ಆರ್ ಪಿ ಐ ಮುಖ್ಯಸ್ಥ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಾಖಿ ಕೂಡ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸೋ ಸಾಧ್ಯತೆಗಳನ್ನು ತಳ್ಳಿ ಹಾಕಿಲ್ಲ.

ರಾಮದಾಸ್ ಅವರು ನನಗೆ ತಂದೆಯ ಸಮಾನ, ಅವರು ಏನೇ ನಿರ್ಧಾರ ತೆಗೆದುಕೊಂಡ್ರೂ ನಾನದಕ್ಕೆ ಬದ್ಧಳಾಗಿರ್ತೇನೆ, ನಾನು ಮಾಯಾವತಿ ವಿರುದ್ಧ ಸ್ಪರ್ಧಿಸಬೇಕೆಂದು ಬಯಸಿದ್ದರೆ ನಾನು ಹಾಗೆ ಮಾಡುತ್ತೇನೆ ಎಂದಿದ್ದಾರೆ.

ಉತ್ತರಪ್ರದೇಶದ ಮತದಾರರಲ್ಲದಿರೋದ್ರಿಂದ ರಾಖಿ ಪ್ಯಾರಾಚೂಟ್ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಲಿದ್ದಾರಂತೆ. ಬಿಜೆಪಿ ಹಾಗೂ ಆರ್ ಪಿ ಐ ಮಿತ್ರಪಕ್ಷಗಳು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರಲಿವೆ ಎಂಬ ವಿಶ್ವಾಸ ಅವರದ್ದು. ಉಭಯ ಪಕ್ಷಗಳ ಪರ ಪ್ರಚಾರ ಮಾಡುವುದಾಗಿಯೂ ರಾಖಿ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...