alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾ ಮುಂದೆ ಗುಟ್ಟು ಬಿಚ್ಚಿಟ್ಟ ರಾಖಿ ಸಾವಂತ್

ವಿವಾದಗಳಿಂದಲೇ ಸುದ್ದಿಯಾದವಳು ನಟಿ ರಾಖಿ ಸಾವಂತ್. ಯಾವುದೇ ಸಂಗತಿಯಿರಲಿ ಅದಕ್ಕೊಂದು ಕಮೆಂಟ್ ಮಾಡಿ ರಾಖಿ ಚರ್ಚೆಗೆ ಬರ್ತಾಳೆ. ಆದ್ರೆ ಈ ಬಾರಿ ತನ್ನ ವೈಯಕ್ತಿಕ ಜೀವನವನ್ನು ಕ್ಯಾಮರಾ ಮುಂದಿಟ್ಟು ಕಣ್ಣೀರಿಟ್ಟಿದ್ದಾಳೆ ರಾಖಿ.

ಟಿವಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಖಿ, ನನಗೆ ಅವಕಾಶ ಸಿಗದೆ ಹೋದಾಗ ನನ್ನ ಸೌಂದರ್ಯ ಬದಲಿಸಿಕೊಳ್ಳುವ ಅನಿವಾರ್ಯತೆ ಎದುರಾಯ್ತು ಎಂದು ಹೇಳಿದ್ದಾಳೆ. ರಾಖಿ ನೃತ್ಯ ಮಾಡುವುದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲವಂತೆ. ರಾಖಿ ಡಾನ್ಸ್ ನೋಡಿ ಮನೆಯವರು ಕೋಪಗೊಳ್ಳುತ್ತಿದ್ದರಂತೆ.

ಮುಂಬೈಗೆ ಬಂದ ರಾಖಿ ನಿರ್ದೇಶಕರ ಮುಂದೆ ಡಾನ್ಸ್ ಮಾಡಿ ತನ್ನ ಪ್ರತಿಭೆ ತೋರಿಸಿಲು ಶುರು ಮಾಡಿದ್ಲಂತೆ. ಆದ್ರೆ ಒಂದೂ ಅವಕಾಶ ಸಿಗಲಿಲ್ಲ. ಇವ್ರ ಮುಂದೆ ಡಾನ್ಸ್ ಮಾಡುವ ಬದಲು ಬಾರ್ ನಲ್ಲಿ ಡಾನ್ಸ್ ಮಾಡಿದ್ರೆ ಸ್ವಲ್ಪ ಗಳಿಸಬಹುದು ಎಂಬ ನಿರ್ಧಾರಕ್ಕೆ ಬಂದ ರಾಖಿ ಸೌಂದರ್ಯ ಹೆಚ್ಚಿಸಿಕೊಳ್ಳುವ ತೀರ್ಮಾನಕ್ಕೆ ಬಂದ್ಲಂತೆ.

ಶಸ್ತ್ರಚಿಕಿತ್ಸೆಗೆ ಒಳಗಾದ ನಾನು, ಆಪರೇಷನ್ ಗಿಂತ ಮೊದಲು ನೀರೂ ಆಗಿದ್ದವಳು ವಾಪಸ್ ಬಂದಾಗ ರಾಖಿ ಸಾವಂತ್ ಆಗಿದ್ದೆ ಎಂದಿದ್ದಾಳೆ. ನಿರೂಪಕರು ರಾಖಿಯನ್ನು ನೀರೂ ಎಂದು ಕರೆಯುತ್ತಿದ್ದಂತೆ ರಾಖಿ ಶೋನಲ್ಲಿ ಭಾವುಕಳಾದ್ಲು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...