alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟಿಗೆ ಪಿಂಕ್ ಕಲರ್ ನೀಡಿರುವ ಹಿಂದಿನ ಕಾರಣ ಹೇಳಿದ್ದಾಳೆ ರಾಖಿ

rakhi-sawant

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2 ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟು ಎಲ್ಲರ ಚರ್ಚೆಗೆ ಕಾರಣವಾಗಿದೆ. ನೋಟಿಗೆ ಸಂಬಂಧಿಸಿದಂತೆ ಸಾಕಷ್ಟು ಜೋಕ್ ಗಳು ಬಂದಿವೆ. ಅದ್ರ ಕಲರ್ ಗುಲಾಬಿ ಯಾಕಿದೆ ಎನ್ನುವ ಪ್ರಶ್ನೆ ಕೂಡ ಅನೇಕರಲ್ಲಿ ಹುಟ್ಟಿಕೊಂಡಿತ್ತು. ಈ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಾಲಿವುಡ್ ನಾಟಕದ ರಾಣಿ ರಾಖಿ ಸಾವಂತ್ 2 ಸಾವಿರ ರೂಪಾಯಿ ನೋಟಿನ ಕಲರ್ ಗುಲಾಬಿ ಯಾಕಿದೆ ಎಂಬುದನ್ನು ಹೇಳಿದ್ದಾಳೆ.

ನೋಟಿನ ಕಲರ್ ಗುಲಾಬಿಯಾಗಿರಲು ನಾನೇ ಕಾರಣ ಎಂದೂ ರಾಖಿ ಸಾವಂತ್ ಹೇಳಿದ್ದಾಳೆ. ಅಯ್ಯೋ, ನಾವು ಜೋಕ್ ಮಾಡ್ತಾ ಇಲ್ಲ ಸ್ವಾಮಿ. ನಿಜವಾಗ್ಲೂ ರಾಖಿ ಸಾವಂತ್ 2 ಸಾವಿರ ಹೊಸ ನೋಟಿಗೆ ಗುಲಾಬಿ ಬಣ್ಣ ನೀಡಿ ಅಂತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿನಂತಿ ಮಾಡಿಕೊಂಡಿದ್ದರಂತೆ. ಸ್ವತಃ ರಾಖಿ ಸಾವಂತ್ ಇದನ್ನು ಹೇಳಿದ್ದಾಳೆ.

ಇದೇ ವಿಚಾರಕ್ಕೆ ರಾಖಿ, ಮೋದಿಗೆ ಧನ್ಯವಾದ ಹೇಳಿದ್ದಾಳೆ. ಎಲ್ಲ ಹುಡುಗಿಯರ ಕೆನ್ನೆ ಗುಲಾಬಿ ಬಣ್ಣದಲ್ಲಿರುತ್ತೆ. ಹಾಗಾಗಿ ನೋಟಿನ ಕಲರ್ ಕೂಡ ಗುಲಾಬಿಯಾಗಿರಬೇಕು. ಜೊತೆಗೆ ಈ ನೋಟು ಕೇವಲ ಮಹಿಳೆಯರಿಗೆ ಮಾತ್ರ ಎಂದಿದ್ದಾಳೆ ರಾಖಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...