alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಖಾ ಧರಿಸಿ ಕೋರ್ಟ್ ಗೆ ಬಂದ್ಲು ಡ್ರಾಮಾ ಕ್ವೀನ್

untitled1_1499416403_618x347

ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಗುರುವಾರ ರಾಖಿ ಸಾವಂತ್ ಬುರ್ಖಾ ಧರಿಸಿ ಕೋರ್ಟ್ ಗೆ ಬಂದಿದ್ದಳು. ರಾಮಾಯಣ ರಚಿಸಿರುವ ವಾಲ್ಮಿಕಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಖಿ ವಿರುದ್ಧ ಲುಧಿಯಾನಾ ಕೋರ್ಟ್ ನಲ್ಲಿ ಕೇಸ್ ದಾಖಲಾಗಿತ್ತು. ಲೂಧಿಯಾನಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಕದ್ದು ಮುಚ್ಚಿ ಬುರ್ಖಾ ಧರಿಸಿ ಬಂದ ರಾಖಿಗೆ ಜಾಮೀನು ಸಿಕ್ಕಿದೆ.

ರಾಖಿ ಸಾವಂತ್ ವಿರುದ್ಧ ಜೂನ್ 2ರಂದು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದ ಕೋರ್ಟ್ ಜುಲೈ 7ರೊಳಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚನೆ ನೀಡಿತ್ತು. ಒಂದು ವೇಳೆ ರಾಖಿ ಜುಲೈ 7 ರೊಳಗೆ ಕೋರ್ಟ್ ಮುಂದೆ ಹಾಜರಾಗದಿದ್ದಲ್ಲಿ ಬಂಧನಕ್ಕೆ ಆದೇಶ ನೀಡಿತ್ತು. ಮಾಧ್ಯಮ ಹಾಗೂ ಜನರಿಂದ ತಪ್ಪಿಸಿಕೊಳ್ಳಲು ರಾಖಿ ಬುರ್ಖಾ ಧರಿಸಿ ಬಂದಿದ್ದಳು. ಒಂದೊಂದು ಲಕ್ಷದ ಎರಡು ಬಾಂಡ್ ಪಡೆದುಕೊಂಡ ಕೋರ್ಟ್ ರಾಖಿಗೆ  ಜಾಮೀನು ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...