alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಬಳಿ 5-5 ಕೋಟಿ ಕೇಳಿದ ರಾಖಿ, ಆರ್ಶಿ

ಸಲ್ಮಾನ್ ಖಾನ್ ಅಭಿನಯದ ರೇಸ್-3 ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ ಚಿತ್ರ 100 ಕೋಟಿ ಕ್ಲಬ್ ಸೇರಿದೆ. ಈ ಸಂದರ್ಭವನ್ನು ನಟಿ ರಾಖಿ ಸಾವಂತ್ ಹಾಗೂ ಆರ್ಶಿ ಖಾನ್ ಬಳಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ನಮಗೆ ತಲಾ 5 ಕೋಟಿ ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಆರ್ಶಿ ಖಾನ್, ಸಲ್ಮಾನ್ ಚಿತ್ರದಲ್ಲಿದ್ದಾರೆಂಬ ಕಾರಣಕ್ಕೆ ಚಿತ್ರ ನೋಡಿದ್ದೇನೆ. ಸಲ್ಮಾನ್ ರಂತೆ ಮತ್ಯಾರೂ ಇರಲು ಸಾಧ್ಯವಿಲ್ಲ ಎಂದಿದ್ದಾಳೆ ಆರ್ಶಿ. ಚಿತ್ರ 100 ಕೋಟಿ ಕ್ಲಬ್ ಸೇರಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆರ್ಶಿ ಸಲ್ಮಾನ್ ನನಗೆ 5 ಕೋಟಿ ನೀಡಬೇಕು ಎಂದಿದ್ದಾಳೆ.

ಈ ಸಂದರ್ಭವನ್ನು ರಾಖಿ ಸಾವಂತ್ ಕೂಡ ಬಿಟ್ಟಿಲ್ಲ. ನಾನು ರೇಸ್-3 ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದೇನೆ. ಚಿತ್ರದ ಗಳಿಕೆಯಲ್ಲಿ ನನಗೊಂದಿಷ್ಟು ಹಣ ನೀಡಬೇಕು ಎಂದಿದ್ದಾಳೆ. ಚಿತ್ರದಲ್ಲಿ ಸಲ್ಮಾನ್ ಹಾಲಿವುಡ್ ಹೀರೋನಂತೆ ಮಿಂಚಿದ್ದಾರೆ ಎಂದಿದ್ದಾಳೆ.

ಚಿತ್ರದ ಕಥೆ ನನಗೆ ತುಂಬಾ ಇಷ್ಟವಾಯ್ತು. ನಿರ್ಮಾಪಕ ರಮೇಶ್ ಕಥೆ ಹೇಳ್ತಿದ್ದಂತೆ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲು ಹೇಳಿದೆ. ಅದಕ್ಕೆ ಅವ್ರು ಒಪ್ಪಿದ್ದರು. ಸಿನಿಮಾದಲ್ಲಿ ನನ್ನ ಪಾತ್ರ ನೆಗಿಟಿವ್ ಆಗಿಯೂ ಇಲ್ಲ ಪಾಸಿಟಿವ್ ಆಗಿಯೂ ಇಲ್ಲ. ಅದೊಂದು ಪಾತ್ರವಷ್ಟೆ ಎಂದಿದ್ದಾರೆ ಸಲ್ಮಾನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...