alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಮದುವೆ ಫಿಕ್ಸ್ ಆಗಿ ವಾರವಾಗಿಲ್ಲ ಆಗ್ಲೇ ಮುರಿದು ಬಿತ್ತು ಸಂಬಂಧ…!

ಡ್ರಾಮಾ ಕ್ವೀನ್ ರಾಖಿ ಸಾವಂತ್ ಏನು ಹೇಳಿದ್ರೂ ನಂಬೋದು ಕಷ್ಟ. ರಾಖಿ ಸಾವಂತ್ ಮದುವೆ ಎಂದಾಗ್ಲೂ ಜನ ಇದು ಪ್ರಚಾರ ಬಿಡ್ರಪ್ಪಾ, ಆಕೆ ಮದುವೆ ಆಗಲ್ಲ ಎಂದಿದ್ದರು. ಈಗ ಇದು ನಿಜವಾಗಿದೆ. ದೀಪಕ್ ಜೊತೆ ಮದುವೆಯಾಗುವುದಾಗಿ ಹೇಳಿದ್ದ ರಾಖಿ ಒಂದು ವಾರದಲ್ಲಿಯೇ ಸಂಬಂಧ ಮುರಿದುಕೊಂಡಿದ್ದಾಳೆ.

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ರಾಖಿ ಹಾಗೂ ದೀಪಕ್ ಚರ್ಚೆಯಲ್ಲಿದ್ದರು. ರಾಖಿ ಸಾವಂತ್ ಮದುವೆ ಕಾರ್ಡ್ ಪೋಸ್ಟ್ ಮಾಡಿದ್ರೆ ದೀಪಕ್ ಕನ್ಯತ್ವ ಪರೀಕ್ಷೆ ಪತ್ರವನ್ನು ಪೋಸ್ಟ್ ಮಾಡಿದ್ದ.

ಇದಾದ ನಂತ್ರ ಮುಂಬೈನಲ್ಲಿ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿದ್ದರು. ಲಾಸ್ ಏಂಜಲೀಸ್ ನಲ್ಲಿ ಡಿಸೆಂಬರ್ 31 ರಂದು ಮದುವೆಯಾಗುವುದಾಗಿ ರಾಖಿ ಹೇಳಿದ್ದಳು. ನಗ್ನಳಾಗಿ ಮದುವೆ ಆಗ್ತೇನೆ ಎಂದೂ ರಾಖಿ ಹೇಳಿದ್ದಳು.

ಈ ಎಲ್ಲದರ ಮಧ್ಯೆ ಈಗ ರಾಖಿಯ ಇನ್ನೊಂದು ವಿಡಿಯೋ ಇನ್ಸ್ಟ್ರಾಗ್ರಾಮ್ ಗೆ ಅಪ್ಲೋಡ್ ಆಗಿದೆ. ರಾಖಿ ಸಾವಂತ್, ದೀಪಕ್ ವಿರುದ್ಧ ಆರೋಪ ಮಾಡಿದ್ದಾಳೆ. ದೀಪಕ್ ನಿಂದಾಗಿ ಮನೆಯವರು ನೊಂದುಕೊಂಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಕೆಟ್ಟದಾಗಿ ದೀಪಕ್ ಕಮೆಂಟ್ ಮಾಡ್ತಾನೆ. ನನಗೆ ಇದು ಇಷ್ಟವಾಗೋದಿಲ್ಲ. ಹಾಗಾಗಿ ಇನ್ಸ್ಟ್ರಾಗ್ರಾಮ್ ನಲ್ಲಿ ದೀಪಕ್ ಅಕೌಂಟ್ ಬ್ಲಾಕ್ ಮಾಡ್ತೇನೆ ಎಂದ ರಾಖಿ, ಇಲ್ಲಿಗೆ ಸಾಕು. ಹೊಸ ಆರಂಭ ಮಾಡ್ತಾನೆ ಎನ್ನುವ ಮೂಲಕ ದೀಪಕ್-ತನ್ನ ಸಂಬಂಧಕ್ಕೆ ಇತಿಶ್ರೀ ಹಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...