alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ-ಹಗಲೆನ್ನದೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾದ ರಜನಿ

rajnikanth_2_053017115007

ಸೂಪರ್ ಸ್ಟಾರ್ ರಜನಿಕಾಂತ್ ಕಾಳ ಕರಿಕಾಳನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ರಜನಿಕಾಂತ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನ ಗ್ರ್ಯಾಂಡ್ ರಸ್ತೆಯಲ್ಲಿ ಜನ ಸಾಗರದ ಮಧ್ಯೆಯೇ ರಜನಿ ಕೆಲ ದೃಶ್ಯಗಳನ್ನು ಶೂಟ್ ಮಾಡಿದ್ದಾರೆ.

ಮುಂಬೈ ಗ್ರ್ಯಾಂಡ್ ರೋಡ್ ನಂತ್ರ ಧಾರಾವಿ ಮತ್ತು ವಾಡಾಲಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ರಜನಿಗೆ ದಿನ-ರಾತ್ರಿಯ ವ್ಯತ್ಯಾಸ ತಿಳಿಯುತ್ತಿಲ್ಲ. ತಡರಾತ್ರಿಯಾದ್ರೂ ಚಿತ್ರೀಕರಣ ನಡೆಸುತ್ತಿದೆ ಚಿತ್ರತಂಡ.

ಚಿತ್ರೀಕರಣದ ವೇಳೆಯೂ ಭದ್ರತೆ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ. ಶೂಟಿಂಗ್ ವೇಳೆಯೂ ರಜನಿ ಅಕ್ಕಪಕ್ಕವೇ ಭದ್ರತಾ ಸಿಬ್ಬಂದಿ ಕಾಣಸಿಗ್ತಾರೆ. ರಂಜಿತ್ ಚಿತ್ರವನ್ನು ನಿರ್ದೇಶನ ಮಾಡ್ತಿದ್ದಾರೆ. ಮಗುವೊಂದರ ಜೀವನ ಕಥೆಯನ್ನು ಚಿತ್ರ ಆಧರಿಸಿದ್ದು ಪ್ರತಿಯೊಂದು ವಯಸ್ಸಿಗೂ ರಜನಿ ಲುಕ್ ಬದಲಾಗುತ್ತದೆ. ಇದ್ರ ಬಗ್ಗೆ ವಿಶೇಷ ಗಮನ ನೀಡಲಾಗಿದ್ದು, ಇದೊಂದು ಸವಾಲಿನ ಕೆಲಸವೆಂದು ಚಿತ್ರತಂಡ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...