alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ್, ರಜನಿಕಾಂತ್ 2.0 ಚಿತ್ರಕ್ಕೆ ಮತ್ತೆ ಖರ್ಚಾಗಲಿದೆ 100 ಕೋಟಿ…!

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಹಳ ಚರ್ಚೆಯಲ್ಲಿದೆ. ಚಿತ್ರ ಬಿಡುಗಡೆಗೆ ಮುಹೂರ್ತ ಕೂಡಿ ಬರ್ತಿಲ್ಲ. ಜನವರಿ 25ರಂದು ಚಿತ್ರ ತೆರೆಗೆ ಬರುತ್ತೆ ಎನ್ನಲಾಗಿತ್ತು. ಆದ್ರೆ ಅಕ್ಷಯ್ ಕುಮಾರ್ ‘ಪ್ಯಾಡ್ ಮ್ಯಾನ್’ ಅಂದೇ ಬಿಡುಗಡೆಯಾಗಿದ್ದರಿಂದ ಚಿತ್ರ ಮುಂದೂಡಲ್ಪಟ್ಟಿತು.

ನಂತ್ರ ಏಪ್ರಿಲ್ ನಲ್ಲಿ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಯ್ತು. ಜೂನ್ ಕಳೆದು ಜುಲೈ ಬರ್ತಿದ್ದರೂ ಚಿತ್ರ ಮಾತ್ರ ತೆರೆ ಮೇಲೆ ಬಂದಿಲ್ಲ. ಬಜೆಟ್ ಹೆಚ್ಚಾಗಿದ್ದರಿಂದ ಚಿತ್ರ ತೆರೆಗೆ ಬರಲು ವಿಳಂಬವಾಗ್ತಿದೆ ಎಂಬ ಸುದ್ದಿ ಹರಿದಾಡ್ತಿತ್ತು. ಆದ್ರೆ ಈಗ ಮತ್ತೊಂದು ಸುದ್ದಿಯಿದೆ.

ಚಿತ್ರದ ಗ್ರಾಫಿಕ್ಸ್ ವರ್ಕ್ ಇನ್ನೂ ಪೂರ್ಣಗೊಂಡಿಲ್ಲವಂತೆ. ಹಗಲು, ರಾತ್ರಿ ಗ್ರಾಫಿಕ್ಸ್ ಕೆಲಸ ಮಾಡಿದ್ರೂ ಮುಗಿಯುತ್ತಿಲ್ಲವಂತೆ. ಚಿತ್ರ ನಿರ್ಮಾಪಕ ಶಂಕರ್  ಗೆ ಗ್ರಾಫಿಕ್ಸ್ ವರ್ಕ್ ಇಷ್ಟವಾಗಲಿಲ್ಲವಂತೆ. ಹಾಗಾಗಿ ಮತ್ತೆ ಗ್ರಾಫಿಕ್ಸ್ ವರ್ಕ್ ಮಾಡಲು ಸೂಚನೆ ನೀಡಿದ್ದಾರಂತೆ. ಇದಕ್ಕಾಗಿ ಇನ್ನೂ 100 ಕೋಟಿ ಹೆಚ್ಚುವರಿ ಖರ್ಚಾಗಲಿದೆ ಎನ್ನಲಾಗ್ತಿದೆ. 450 ಕೋಟಿ ಬಜೆಟ್ ನ ಚಿತ್ರ ಇದಾಗಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...