alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ‘ಬಾಹುಬಲಿ’ ನಿರ್ದೇಶಕರ ಹೊಸ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ

‘ಬಾಹುಬಲಿ -2’ ಬಳಿಕ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಯಾವ ಸಿನಿಮಾ ಮಾಡ್ತಾರೆ ಎನ್ನುವುದು ಹಾಟ್ ಟಾಪಿಕ್ ಆಗಿತ್ತು. ಚಿತ್ರದಲ್ಲಿ ಅಭಿನಯಿಸಿದ್ದ ಪ್ರಭಾಸ್, ಅನುಷ್ಕಾ, ರಾಣಾ ದಗ್ಗುಬಾಟಿ ಮೊದಲಾದವರು ಮುಂದಿನ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

‘ಬಾಹುಬಲಿ -2’ ನಂತರದಲ್ಲಿ ರಾಜಮೌಳಿ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಸ್ಟಾರ್ ನಟರು ಕಾಯುತ್ತಿದ್ದಾರೆ. ಹೀಗಿದ್ದರೂ, ರಾಜಮೌಳಿ ಮುಂದಿನ ಚಿತ್ರದ ಕುರಿತಾಗಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಇತ್ತೀಚೆಗೆ ರಾಜಮೌಳಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿ ಭಾರೀ ಸಂಚಲನ ಮೂಡಿಸಿತ್ತು. ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್. ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಅವರೊಂದಿಗೆ ರಾಜಮೌಳಿ ಇರುವ ಫೋಟೋ ಅದಾಗಿತ್ತು.

ನಟ ಸಾಯಿ ಧರ್ಮತೇಜ ಈ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಸಾಯಿ ಧರ್ಮತೇಜ, ರಾಜಮೌಳಿಯವರ ಮುಂದಿನ ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್., ರಾಮ್ ಚರಣ್ ನಟಿಸುವುದನ್ನು ಖಚಿತಪಡಿಸಿದ್ದಾರೆ.

ಈ ಚಿತ್ರದಲ್ಲಿ ಇಬ್ಬರೂ ಸ್ಟಾರ್ ಗಳು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ ನಿಂದ ಚಿತ್ರ ಆರಂಭವಾಗಲಿದ್ದು, 2019 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರಕತೆ ರೆಡಿಯಾಗ್ತಿದ್ದು, ಇಬ್ಬರೂ ನಟರಿಗೆ ಸಮಾನ ಆದ್ಯತೆ ನೀಡಲಾಗಿದೆ. ಅಕ್ಟೋಬರ್ ವೇಳೆಗೆ ಒಪ್ಪಿಕೊಂಡ ಪ್ರಾಜೆಕ್ಟ್ ಗಳನ್ನು ಮುಗಿಸಿ ತಮ್ಮ ಚಿತ್ರಕ್ಕೆ ರೆಡಿಯಾಗುವಂತೆ ರಾಜಮೌಳಿ ಜೂನಿಯರ್ ಎನ್.ಟಿ.ಆರ್. ಮತ್ತು ರಾಮ್ ಚರಣ್ ಅವರಿಗೆ ತಿಳಿಸಿದ್ದಾರೆ.

ಈ ಬಿಗ್ ಸ್ಟಾರ್ ಗಳ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ನಟ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲವೂ ಸಸ್ಪೆನ್ಸ್ ಆಗಿದ್ದು ರಾಜಮೌಳಿ ಸದ್ದಿಲ್ಲದೇ ತಯಾರಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...