alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯುತ್ತಮ ಯೋಗಪಟು ಅಣ್ಣಾವ್ರು….

ಕೇವಲ ಅಭಿನಯ, ಹಾಡುಗಾರರಷ್ಟೇ ಅಲ್ಲ ಅಣ್ಣಾವ್ರು ಅತ್ಯುತ್ತಮ ಜೀವನ ಶೈಲಿಯನ್ನೂ ರೂಢಿಸಿಕೊಂಡಿದ್ದರು. ಅದರ ಒಂದು ಭಾಗವೇ ಯೋಗಾಸನ.

ರಾಜ್ ಕುಮಾರ್ ಅವರಿಗೆ, 1978 ರಲ್ಲಿ ‘ಅಪರೇಷನ್ ಡೈಮಂಡ್ ರಾಕೆಟ್’ ಸಿನಿಮಾದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಅನಂತರ ಸಂಬಂಧಿಕರೊಬ್ಬರು ನೀಡಿದ ಸಲಹೆಯ ಮೇರೆಗೆ ರಾಜ್ ಕುಮಾರ್ ಯೋಗಾಸನ ಆರಂಭಿಸಿದರಂತೆ.

ಸಾಕಷ್ಟು ಕಠಿಣ ಆಸನಗಳನ್ನು ಮಾಡುತ್ತಿದ್ದ ರಾಜ್ ಕುಮಾರ್ ಅವರಿಗೆ ಯೋಗಾಸನ ಒಂದು ಹವ್ಯಾಸವಾಗಿಬಿಟ್ಟಿತ್ತು. ಹೀಗಾಗಿಯೇ ವಯಸ್ಸಾದರೂ ಅವರು ಆರೋಗ್ಯವಾಗಿ, ಫಿಟ್ ಆಗಿದ್ದರು. ಅಲ್ಲದೇ ಪತ್ನಿ ಪಾರ್ವತಮ್ಮನವರಿಗೂ ಯೋಗ ಹೇಳಿಕೊಟ್ಟಿದ್ದರಂತೆ.

ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ರಾಜ್ ಕುಮಾರ್ ಕಾಡಿನಲ್ಲೇ ಯೋಗ ಮಾಡುತ್ತಿದ್ದರು. ಹೀಗಾಗಿ, 108 ದಿನಗಳ ಕಾಲ ಅರಣ್ಯದಲ್ಲಿದ್ದರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರಿಗೆ ಸಾಧ್ಯವಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...