alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ದೇಶಕ ರಾಜ್ಕುಮಾರ್ ಸಂತೋಷಿ ಆರೋಗ್ಯದಲ್ಲಿ ಏರುಪೇರು

ಚಿತ್ರ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಬುಧವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಕುಮಾರ್ ಸಂತೋಷಿಗೆ ಅಚಾನಕ್ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಘಾಯಲ್, ಘಾತಕ್, ಅಂದಾಜ್ ಅಪನಾ ಅಪನಾ, ದಾಮಿನಿ, ಪುಕಾರ್ ಮತ್ತು ಚೈನಾ ಗೇಟ್ ನಂತಹ ಅತ್ಯುತ್ತಮ ಚಿತ್ರಗಳನ್ನು ರಾಜ್ಕುಮಾರ್ ಸಂತೋಷಿ ಬಾಲಿವುಡ್ ಗೆ ನೀಡಿದ್ದಾರೆ. ಶ್ರೀದೇವಿ ಕಳೆದುಕೊಂಡ ದುಃಖದಲ್ಲಿರುವ ಬಾಲಿವುಡ್ ಗೆ ರಾಜ್ಕುಮಾರ್ ಸಂತೋಷಿ ಅನಾರೋಗ್ಯ ಸುದ್ದಿ ಮತ್ತಷ್ಟು ನೋವು ನೀಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...