alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ‘ನಿರ್ದೇಶಕ’ ರಾಜಕುಮಾರ್ ಹಿರಾನಿ ವಿರುದ್ಧ ಅತ್ಯಾಚಾರದ ಆರೋಪ

ಮುಂಬೈ: ’ಮುನ್ನಾಭಾಯಿ ಎಂಬಿಬಿಎಸ್’, ‘ತ್ರೀ ಈಡಿಯಟ್ಸ್’ ‘ಪಿಕೆ’, ‘ಸಂಜು’ ಸೇರಿದಂತೆ ಅನೇಕ ಜನಪ್ರಿಯ ಸಿನಿಮಾ ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಸಂಜು’ ಚಿತ್ರದ ಸಹಾಯಕ ನಿರ್ದೇಶಕಿಗೆ ರಾಜಕುಮಾರ್ ಹಿರಾನಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಸಿನಿಮಾ ಕೆಲಸದ ಸಮಯದಲ್ಲಿ ಅವರು ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ.

ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡಿದ್ದಕ್ಕೆ, ಸಿನಿಮಾದಿಂದ ಕೈಬಿಟ್ಟು ವೃತ್ತಿಜೀವನ ನಾಶ ಮಾಡುವುದಾಗಿ ರಾಜಕುಮಾರ್ ಹಿರಾನಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದ್ದು, ಕೆಲಸ ಉಳಿಸಿಕೊಳ್ಳುವುದಕ್ಕಾಗಿ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಆದರೆ, ಈ ಆರೋಪವನ್ನು ರಾಜಕುಮಾರ್ ಹಿರಾನಿ ಅವರ ವಕೀಲರು ಅಲ್ಲಗಳೆದಿದ್ದು, ಚಿತ್ರ ತಂಡದವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ.

ಮೀ ಟೂ ಅಭಿಯಾನದ ಬಳಿಕ ಅನೇಕರು ತಮಗಾದ ಅನುಭವ ಹಂಚಿಕೊಂಡಿದ್ದು, ರಾಜಕುಮಾರ್ ಹಿರಾನಿ ಅವರ ವಿರುದ್ಧ ‘ಸಂಜು’ ಚಿತ್ರದ ಸಹಾಯಕ ನಿರ್ದೇಶಕಿ ಇಂತಹ ಆರೋಪ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...