alex Certify
ಕನ್ನಡ ದುನಿಯಾ       Mobile App
       

Kannada Duniya

ಉ. ಭಾರತದ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ‘ಕಬಾಲಿ’

rajinikanth-in-kabaliದಕ್ಷಿಣ ಭಾರತದ ಚಿತ್ರಗಳು ಈಗ ಉತ್ತರ ಭಾರತದ ಪ್ರೇಕ್ಷಕರನ್ನೂ ಮೋಡಿ ಮಾಡಿವೆ. ಈ ಹಿಂದೆಲ್ಲಾ ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಡಬ್ ಮಾಡಿ ಚಿತ್ರ ಬಿಡುಗಡೆ ಮಾಡುವ ಪರಿಪಾಠ ಆರಂಭವಾಗಿದ್ದು, ಹೀಗೆ ಬಿಡುಗಡೆಯಾದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಭಾರೀ ಗಳಿಕೆಯನ್ನು ಮಾಡಿತ್ತು.

ಇದೀಗ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಚಿತ್ರವನ್ನು ಉತ್ತರ ಭಾರತದ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆಂದು ಹೇಳಲಾಗಿದೆ. ದಕ್ಷಿಣ ಭಾರತ ಹೊರತುಪಡಿಸಿ ದೇಶ ಹಾಗೂ ವಿದೇಶಗಳ ಬಿಡುಗಡೆ ಹಕ್ಕನ್ನು ಪಡೆದಿರುವ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಸಂಸ್ಥೆ ಇದನ್ನು ಖಚಿತಪಡಿಸಿದೆ.

ಜುಲೈ 22 ರಂದು ‘ಕಬಾಲಿ’ ದೇಶ, ವಿದೇಶಗಳಲ್ಲಿ ತೆರೆ ಕಾಣಲಿದ್ದು, ಹಿಂದಿಗೆ ಡಬ್ ಆಗಲಿದೆಯಲ್ಲದೇ ಸಬ್ ಟೈಟಲ್ಸ್ ಗಳನ್ನೂ ಸಹ ಹಾಕಲು ಯೋಜಿಸಲಾಗಿದೆ ಎನ್ನಲಾಗಿದೆ. ಟೀಸರ್ ಮೂಲಕ ಈಗಾಗಲೇ ಭರ್ಜರಿ ಹವಾ ಸೃಷ್ಟಿಸಿರುವ ‘ಕಬಾಲಿ’ ಯನ್ನು ವೀಕ್ಷಿಸಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದು, ರಜನಿಕಾಂತ್, ರಾಧಿಕಾ ಆಪ್ಟೆ, ದಿನೇಶ್ ರವಿ, ಜಾನ್ ವಿಜಯ್ ಪ್ರಮುಖ ತಾರಾಂಗಣದಲ್ಲಿರುವ ಈ ಚಿತ್ರವನ್ನು ರಂಜಿತ್ ನಿರ್ದೇಶಿಸಿದ್ದು, ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...