alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಯ ‘2.0’ ಚಿತ್ರಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ

588523-2-0

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘2.0’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರಕ್ಕೆ ವಿಶ್ವದರ್ಜೆಯ VFX ಮಾನದಂಡಗಳನ್ನು ಅಳವಡಿಸಲು ರಿಲೀಸ್ ಅನ್ನೇ ಮುಂದಕ್ಕೆ ಹಾಕಲಾಗಿದೆ. ಈ ಮೊದಲು ದೀಪಾವಳಿ ವೇಳೆಗೆ ‘2.0’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ದೀಪಾವಳಿ ಬದಲು ಚಿತ್ರ 2018ರ ಜನವರಿ 25ರಂದು ತೆರೆಗೆ ಬರಲಿದೆ.

2010ರಲ್ಲಿ ಬಿಡುಗಡೆಯಾದ ತಮಿಳಿನ ಸೂಪರ್ ಹಿಟ್ ಚಿತ್ರ ‘ಎಂದಿರನ್’ ಸಿನೆಮಾದ ಸೀಕ್ವಲ್ ‘2.0’. ಸುಮಾರು 450 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗ್ತಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ 2.0 ಚಿತ್ರ ತೆರೆಗೆ ಬರಲಿದೆ.

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಕೂಡ ಅಭಿನಯಿಸಿದ್ದಾರೆ. ಅಮೀರ್ ಖಾನ್ ಅಭಿನಯದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರ ದೀಪಾವಳಿಯಲ್ಲೇ ರಿಲೀಸ್ ಆಗಲಿದೆ. ‘2.0’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರೋದ್ರಿಂದ ಅಮೀರ್ ಖಾನ್ ಹಾಗೂ ರಜನಿ ಸಿನೆಮಾಗಳ ಮಧ್ಯೆ ಪೈಪೋಟಿಯಿಲ್ಲ.

ಆದ್ರೆ ಅಮೀರ್ ಹಾಗೂ ಅಜಯ್ ದೇವಗನ್ ಸಿನಿಮಾಗಳ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಯಾಕಂದ್ರೆ ಅಜಯ್ ದೇವಗನ್ ರ ‘ಗೋಲ್ ಮಾಲ್ ಅಗೇನ್’ ಚಿತ್ರ ಕೂಡ ಈ ವರ್ಷ ದೀಪಾವಳಿಯಲ್ಲೇ ರಿಲೀಸ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...