alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಕ್ಷಮೆಗೆ ಆಗ್ರಹಿಸಿದ ಪುದುಚೇರಿ ಸಿಎಂ, ಕಾರಣವೇನು ಗೊತ್ತಾ?

ತಮಿಳುನಾಡಿನ ತೂತುಕುಡಿಯ ಸ್ಟೆರಲೈಟ್ ತಾಮ್ರ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದವರ ಕುರಿತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ನೀಡಿರುವ ಹೇಳಿಕೆಗೆ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಗರಂ ಆಗಿದ್ದಾರೆ.

ತಾಮ್ರ ಘಟಕದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ, ಸಮಾಜಘಾತುಕ ಶಕ್ತಿಗಳ ಪ್ರವೇಶದಿಂದಾಗಿ ಹಿಂಸಾರೂಪಕ್ಕೆ ತಿರುಗಿತ್ತು ಎಂದು ಹೇಳಿರುವ ರಜನಿಕಾಂತ್, ತಮ್ಮ ಹೇಳಿಕೆಗೆ ಪುರಾವೆ ಒದಗಿಸಬೇಕು. ಇಲ್ಲದಿದ್ದರೆ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕೆಂದು ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಪೊಲೀಸರು ಹಾರಿಸಿದ ಗುಂಡಿಗೆ ಹದಿಮೂರು ಮಂದಿ ಬಲಿಯಾಗಿದ್ದು, ಈ ಘಟನೆಗೆ ದೇಶದ ಜನತೆ ಆಘಾತ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ರಜನಿಕಾಂತ್ ಇಂತಹ ಹೇಳಿಕೆ ನೀಡಬಾರದಿತ್ತು ಎಂದಿರುವ ನಾರಾಯಣಸ್ವಾಮಿ, ಕೆಲವರ ಮಾರ್ಗದರ್ಶನದಂತೆ ರಜನಿಕಾಂತ್ ನಟನೆ ಮಾಡಿರುವ ಸಾಧ್ಯತೆಗಳಿವೆ ಎಂದು ವ್ಯಂಗ್ಯವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...