alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ರಿಂದಲೇ ಬಹಿರಂಗವಾಯ್ತು ಅಮೆರಿಕ ಟ್ರಿಪ್ ರಹಸ್ಯ

rajani us

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ವಿಶ್ವದ ಅನೇಕ ದೇಶಗಳಲ್ಲಿ ರಿಲೀಸ್ ಆಗಿದ್ದು, ಗಳಿಕೆಯಲ್ಲಿಯೂ ಹೊಸ ದಾಖಲೆಯನ್ನೇ ಬರೆದಿದೆ. ಚಿತ್ರದ ಬಗ್ಗೆ ದಿನಕ್ಕೊಂದು ಮಾಹಿತಿ, ದಾಖಲೆ ವಿವರ ಕೇಳಿಬರುತ್ತಲೇ ಇವೆ.

ಆದರೆ, ‘ಕಬಾಲಿ’ ರಿಲೀಸ್ ಗೂ ಮೊದಲು ಪ್ರಚಾರಕ್ಕೆ ಬಾರದೇ ದೂರದ ಅಮೆರಿಕಕ್ಕೆ ಹಾರಿಹೋದ ಸೂಪರ್ ಸ್ಟಾರ್ ರಜನಿಕಾಂತ್, ಅಲ್ಲಿಯೇ ತಾವು ಅಭಿನಯಿಸಿರುವ ‘ಕಬಾಲಿ’ ಸಿನಿಮಾವನ್ನು ಪ್ರೇಕ್ಷಕರೊಂದಿಗೆ ಕುಟುಂಬ ಸಮೇತ ವೀಕ್ಷಿಸಿದ್ದಾರೆ. ಇದೀಗ ರಜನಿಕಾಂತ್ ತವರಿಗೆ ವಾಪಸ್ ಆಗಿದ್ದಾರೆ. ಮಾತ್ರವಲ್ಲ, ತಾವೇಕೆ ಅಮೆರಿಕಕ್ಕೆ ಹೋಗಬೇಕಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ರಜನಿಕಾಂತ್ ನಿರಂತರವಾಗಿ ‘ಕಬಾಲಿ’ ಮತ್ತು ‘ಎಂದಿರನ್ 2’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಇದರಿಂದಾಗಿ ದೈಹಿಕ ಮತ್ತು ಮಾನಸಿಕವಾಗಿ ಬಳಲಿದ್ದರಿಂದ ವಿಶ್ರಾಂತಿಗೆಂದು ಅಮೆರಿಕಕ್ಕೆ ಹೋಗಿದ್ದರಂತೆ. ಜೊತೆಗೆ ಮಗಳು ಐಶ್ವರ್ಯಾ ಹಾಗೂ ಅಳಿಯ ಧನುಷ್ ಕೂಡ ಬಂದಿದ್ದರಂತೆ. ಅಲ್ಲಿ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಕೂಡ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಚಿತ್ರ ಬಿಡುಗಡೆಗೂ ಮೊದಲು ಬಾಲಿವುಡ್ ಹೀರೋಗಳೇ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ, ರಜನಿಕಾಂತ್ ಹೆಸರಿನಲ್ಲೇ ಪ್ರಚಾರ ಇದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...