alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಹೇಳಿದ್ದೇನು?

download

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಜೊತೆ  ಸಂವಾದ ಮುಂದುವರೆಸಿದ್ದಾರೆ. ಐದನೇ ದಿನವಾದ ಇಂದು ಅಭಿಮಾನಿಗಳನ್ನುದ್ದೇಶಿಸಿ ರಜನಿಕಾಂತ್ ಮಾತನಾಡಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಕೇಳಿ ಬಂದ ಪ್ರಶ್ನೆಗೆ ರಜನಿಕಾಂತ್ ಉತ್ತರ ನೀಡಿದ್ದಾರೆ.

ತಿರುಚ್ಚಿ, ಅರ್ಯಾಲೂರು ಹಾಗೂ ತಿರಂಬಳೂರು ಜಿಲ್ಲೆಯ ಅಭಿಮಾನಿಗಳನ್ನುದ್ದೇಶಿ ರಜನಿಕಾಂತ್ ಮಾತನಾಡಿದ್ದಾರೆ. ಅಭಿಮಾನಿಗಳನ್ನು ನೋಡಿ ಸಂತೋಷವಾಯ್ತು ಎಂದ ರಜನಿ ಬೆಂಬಲಿಗರಿಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ  ನಾನು 44 ವರ್ಷದಿಂದ ತಮಿಳುನಾಡಿನಲ್ಲಿದ್ದೇನೆ. ನಾನು ಪಕ್ಕಾ ತಮಿಳಿಗ ಎನ್ನುವ ಮೂಲಕ ರಜನಿಕಾಂತ್ ಸುಬ್ರಹ್ಮಣ್ಯಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಯಾವ ಪಕ್ಷದ ಕೈ ಹಿಡಿಯುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ದಯವಿಟ್ಟು ರಾಜಕೀಯದ ಪ್ರಶ್ನೆ ಕೇಳಬೇಡಿ ಎಂದಿದ್ದಾರೆ. ಎಲ್ಲಿ ಹೋದ್ರೂ ರಾಜಕೀಯದ ಬಗ್ಗೆ ಸ್ಪಷ್ಟನೆ ಕೊಡಿ ಎನ್ನುತ್ತಾರೆ. ಬಿಜೆಪಿಗೆ ಸೇರಲು ನಿಮಗೆ ಒಪ್ಪಿಗೆ ಇದ್ಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಕೂಡ ಪ್ರಶ್ನೆಗಳ ಮೇಲೆ ಪ್ರಶ್ನೆ ಇಡುತ್ತಾರೆ. ಅಲ್ಲಿ ಬರುವ ಪ್ರತಿಕ್ರಿಯೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದ ರಜನಿ ರಾಜಕೀಯದಲ್ಲಿ ಒಳ್ಳೊಳ್ಳೆ ನಾಯಕರಿದ್ದಾರೆ ಎನ್ನುವ ಮೂಲಕ ಮತ್ತೆ ಅರ್ಧ ಗೋಡೆ ಮೇಲೆ ದೀಪವಿಟ್ಟಿದ್ದಾರೆ. ರಾಜಕೀಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಾ ಇದೆ. ಸೂಕ್ತ ಸಮಯ ಬಂದಾಗ ಸೂಕ್ತ ನಿರ್ಧಾರ ಎಂದು ರಜನಿಕಾಂತ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...