alex Certify
ಕನ್ನಡ ದುನಿಯಾ       Mobile App
       

Kannada Duniya

‘ರೋಬೋ’ ನಂತರ ‘ಪೆಟ್ಟಾ’ ಆದ ರಜನಿ…!

ಸೂಪರ್ ಸ್ಟಾರ್ ರಜನಿ ರೊಬೋ 2.0 ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ರಜನಿ ಮುಂದಿನ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದವು. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಆಕ್ಷನ್ ಕಟ್ ನಲ್ಲಿ ರಜನಿ ನಟಿಸೋದು ಫೈನಲ್ ಆಗಿತ್ತು.

ಚಿತ್ರದಲ್ಲಿ ವಿಜಯ್ ಸೇತುಪತಿ, ಸಿಮ್ರನ್ ಸೇರಿದಂತೆ ಬಿಗ್ ಸ್ಟಾರ್ ಕಾಸ್ಟ್ ಕೂಡ ಇತ್ತು. ರಜನಿಗೆ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ತಿರುವಂತಾ ಚಿತ್ರದ ಟೈಟಲ್ ಏನಾಗಿರಬಹುದು ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇತ್ತು.

ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಜನಿ ಅಪ್ ಕಮಿಂಗ್ ಸಿನಿಮಾದ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ. ಅಷ್ಟೇ ಅಲ್ಲ ರಜನಿ ಸಿನಿಮಾದ ಟೈಟಲ್ ಕೂಡ ಫಿಕ್ಸ್ ಆಗಿದೆ. ‘ಪೆಟ್ಟಾ’ ಅನ್ನೋ ಮಾಸ್ ಟೈಟಲ್ ನೊಂದಿಗೆ ರಜನಿ ಬರ್ತಿದ್ದಾರೆ. ಸಿನಿಮಾದ ಫಸ್ಟ್ ಲುಕ್ನಲ್ಲೇ ರಜನಿ ಆಕ್ಷನ್ ಸೀನ್ನಲ್ಲಿ ಮಿಂಚು ಹರಿಸಿದ್ದಾರೆ.

ಪೆಟ್ಟಾ ಟೈಟಲ್ ಟೀಸರ್ ನ್ ಸಿನಿಮಾದ ಸಂಗೀತ ನಿರ್ದೇಶಕ ಅನಿರುದ್ದ್ ಸೇರಿದಂತೆ ಹಲವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ಸಿನಿಮಾದಲ್ಲಿ ರಜನಿ ಲುಕ್ ನೋಡಿ ಫಿದಾ ಆಗಿದ್ದು, ಟೈಟಲ್ ಸಿಕ್ಕಾಪಟ್ಟೆ ಕ್ಯಾಚಿ ಆಗಿದೆ ಅಂತ ಪ್ರತಿಕ್ರಿಯಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...