alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ದಿನವೇ ದಾಖಲೆ ಬರೆದ ‘ಕಾಲಾ’

ಸೂಪರ್ ಸ್ಟಾರ್ ರಜನಿಕಾಂತ್ ‘ಕಾಲಾ’ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ತೆರೆ ಕಾಣುವ ಜೊತೆಗೆ ದಾಖಲೆ ಬರೆದಿದೆ. ಚೆನ್ನೈನಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವೆಂಬ ದಾಖಲೆ ‘ಕಾಲಾ’ ಪಾಲಾಗಿದೆ. ‘ಕಾಲಾ’ ಚಿತ್ರ ಮೊದಲ ದಿನ 1.76 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಚಿತ್ರ ಸಮೀಕ್ಷಕ ರಮೇಶ್ ಬಾಲಾ ಟ್ವೀಟರ್ ನಲ್ಲಿ ಈ ವಿಷ್ಯ ತಿಳಿಸಿದ್ದಾರೆ. ‘ಮರ್ಸೆಲ್’ ಚಿತ್ರದ ದಾಖಲೆ ಮುರಿದ ‘ಕಾಲಾ’ ಚೆನ್ನೈನಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವೆಂಬ ದಾಖಲೆ ಬರೆದಿದೆ. ‘ಮರ್ಸೆಲ್’ ಚಿತ್ರದ ಮೊದಲ ದಿನದ ಕಲೆಕ್ಷನ್ 1.52 ಕೋಟಿ ರೂಪಾಯಿಯಾಗಿತ್ತು. ‘ಕಾಲಾ’ 1.76 ಕೋಟಿ ಕಲೆಕ್ಷನ್ ಮಾಡಿದೆ.

‘ಕಾಲಾ’ ಚಿತ್ರದಷ್ಟು ‘ಮರ್ಸೆಲ್’ ಚಿತ್ರದ ಪ್ರಮೋಷನ್ ಮಾಡಿರಲಿಲ್ಲ. ಆದ್ರೂ ಚಿತ್ರ ಭರ್ಜರಿ ಓಪನಿಂಗ್ ಕಂಡಿತ್ತು ಎಂಬುದು ಕೆಲವರ ಅಭಿಪ್ರಾಯ. ‘ಕಾಲಾ’ ತಮಿಳಿನ ಜೊತೆ ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ತೆರೆ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...