alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಗೆ ಯುವಕ ಕೇಳಿದ ಪ್ರಶ್ನೆಗೆ ದಂಗಾಗಿದ್ದಾರೆ ಜನ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ರಜನಿ ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಅದನ್ನು ವೀಕ್ಷಿಸಲು ವಿದೇಶಿ ಅಭಿಮಾನಿಗಳೂ ಭಾರತಕ್ಕೆ ಆಗಮಿಸುತ್ತಾರೆ.

ಚಿತ್ರರಂಗದಲ್ಲಿನ ಯಶಸ್ಸಿನ ಬಳಿಕ ರಜನಿಕಾಂತ್ ಈಗ ರಾಜಕೀಯದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ರಜನಿಕಾಂತ್ ಅವರಿಗೆ ಯುವಕನೊಬ್ಬ ಕೇಳಿದ ಈ ಪ್ರಶ್ನೆ ಎಲ್ಲರನ್ನು ದಂಗು ಬಡಿಸಿದೆ.

ತೂತುಕುಡಿ ಸ್ಟೆರಲೈಟ್ ತಾಮ್ರ ಘಟಕ ಸ್ಥಗಿತಕ್ಕೆ ಒತ್ತಾಯಿಸಿ ಇತ್ತೀಚೆಗೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ವೇಳೆ 13 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಬುಧವಾರದಂದು ತೂತುಕುಡಿ ಗೆ ಭೇಟಿ ನೀಡಿದ್ದ ರಜನಿ ಗಾಯಾಳುಗಳ ಆರೋಗ್ಯ ವಿಚಾರಿಸಿದರಲ್ಲದೆ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಎದುರಾದ 21 ವರ್ಷದ ಸಂತೋಷ್ ಎಂಬಾತ ರಜನಿಕಾಂತ್ ಅವರಿಗೆ ಯಾರು ನೀವು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ರಜನಿ ಅಷ್ಟೇ ಕೂಲಾಗಿ ನಾನು ರಜನಿಕಾಂತ್ ಎಂದಿದ್ದಾರೆ.

ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತರಹೇವಾರಿ ಕಮೆಂಟುಗಳು ಕೇಳಿ ಬರುತ್ತಿವೆ. ಯುವಕ ನಿಜವಾಗಲೂ ರಜನಿಯನ್ನು ಗೊತ್ತಿಲ್ಲವೆಂಬ ಕಾರಣಕ್ಕೆ ಹೀಗೆ ಕೇಳಿದ್ದಾನೋ ಅಥವಾ ಬೇಕೆಂದೇ ಪ್ರಶ್ನಿಸಿದ್ದಾನೋ ಎಂಬುದು ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...