alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಲಯದ ತಪ್ಪಲಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಿದ ಸೂಪರ್ ಸ್ಟಾರ್

ನಟ ರಜನೀಕಾಂತ್ ಮತ್ತವರ ಸ್ನೇಹಿತರು ಹಿಮಾಲಯದಲ್ಲಿ ಧ್ಯಾನ ಕೇಂದ್ರವೊಂದನ್ನು ಸ್ಥಾಪಿಸಿದ್ದಾರೆ. ಪರಮಹಂಸ ಯೋಗಾನಂದ ಅವರು ಸ್ಥಾಪಿಸಿದ ಯೋಗೋದಾ ಸತ್ಸಂಗ ಸೊಸೈಟಿಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಈ ಧ್ಯಾನ ಕೇಂದ್ರವನ್ನು ತೆರೆಯಲಾಗಿದೆ.

ಕಳೆದ ಒಂದು ದಶಕದಿಂದ್ಲೂ ನಟ ರಜನೀಕಾಂತ್ ಹಿಮಾಲಯದ ದುನಗಿರಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಗುಹೆಗಳಲ್ಲಿ ಕುಳಿತು ಧ್ಯಾನ ಮಾಡುತ್ತಾರೆ. ಇದೇ ಸ್ಥಳದಲ್ಲಿ ಮಹಾವತಾರ ಬಾಬಾಜಿ ತಪಸ್ಸು ಮಾಡಿದ್ದರು ಎಂಬ ಪ್ರತೀತಿ ಇದೆ. ಅವರ ಬಗ್ಗೆ ‘ದಿ ಆಟೋಬಯೋಗ್ರಫಿ ಆಫ್ ಬಾಬಾಜಿ’ ಪುಸ್ತಕದಲ್ಲಿ ಬರೆಯಲಾಗಿದೆ.

ಗುಹೆಗಳ ಸಮೀಪದಲ್ಲಿಯೇ ರಜನಿ ಮತ್ತವರ ಸ್ನೇಹಿತರು ಧ್ಯಾನಕೇಂದ್ರವನ್ನು ಸ್ಥಾಪಿಸಿದ್ದಾರೆ. 2002ರಲ್ಲೇ ರಜನೀಕಾಂತ್ ರನ್ನು ಆ ಗುಹೆಗಳಲ್ಲಿ ಭೇಟಿ ಮಾಡಿದ್ದ ವ್ಯಕ್ತಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಆಶ್ರಮ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ವೆಚ್ಚವಾಗಿದೆ.

ಅದನ್ನೆಲ್ಲ ರಜನಿಕಾಂತ್ ಮತ್ತವರ ಸ್ನೇಹಿತರೇ ಭರಿಸಿದ್ದಾರೆ. ವಿಶೇಷ ಅಂದ್ರೆ ಭಕ್ತರು ಇಲ್ಲಿ ಉಳಿದುಕೊಳ್ಳಬಹುದು. ಉಚಿತ ವಸತಿ ವ್ಯವಸ್ಥೆ ಇದೆ. ನವೆಂಬರ್ ನಲ್ಲಿ ಇದನ್ನು ಭಕ್ತರ ಬಳಕೆಗೆ ತೆರೆಯಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...