alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ರಜನಿಕಾಂತ್ ವಾರ್ನಿಂಗ್

kala-a

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುವ ಸುದ್ದಿ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ಪರ- ವಿರೋಧ ಚರ್ಚೆಗಳು, ಪ್ರತಿಭಟನೆಗಳೂ ನಡೆದಿದೆ.

ರಾಜಕೀಯ ಪ್ರವೇಶದ ವದಂತಿಗಳ ಬೆನ್ನಲ್ಲೇ ರಜನಿ ಅಭಿನಯದ ‘ಕಾಲ ಕರಿಕಾಲನ್’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಲಾಂಚ್ ಮಾಡಲಾಗಿದೆ.

ರಜನಿಕಾಂತ್ ಮಾತ್ರ ಅಭಿಮಾನಿಗಳಿಗೆ ವಾರ್ನಿಂಗ್ ಮಾಡಿದ್ದಾರೆ. ಅಭಿಮಾನಿಗಳ ಸಂಘದ ನಿಯಮ ಪಾಲಿಸದವರನ್ನು ಮುಲಾಜಿಲ್ಲದೇ ಸಂಘದಿಂದ ಉಚ್ಛಾಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶಿಸ್ತಿನಿಂದ ನಡೆದುಕೊಳ್ಳಬೇಕೆಂದು ರಜನಿ, ಅಭಿಮಾನಿಗಳಿಗೆ ಹೇಳಿದ್ದು ಯಾವ ವಿಚಾರವಾಗಿ ಹೀಗೆ ಎಚ್ಚರಿಕೆ ನೀಡಿದ್ದಾರೆ ಎಂಬುದನ್ನು ತಿಳಿಸಿಲ್ಲ.

ರಜನಿ ರಾಜಕೀಯ ಪ್ರವೇಶಕ್ಕೆ ಶುಭಕೋರಿ ಅಭಿಮಾನಿಗಳು ಪೋಸ್ಟರ್ ಗಳನ್ನು ಹಾಕಿ ಸಂಭ್ರಮಿಸಿದ್ದಾರೆ. ಅವರ ರಾಜಕೀಯ ಪ್ರವೇಶ ವಿರೋಧಿಸಿ ತಮಿಳು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಇದನ್ನು ಖಂಡಿಸಿ ರಜನಿ ಅಭಿಮಾನಿಗಳು ಮೆರವಣಿಗೆ ನಡೆಸಿದ್ದರು.

ಅಭಿಮಾನಿಗಳ ಹಿತರಕ್ಷಣಾ ವೇದಿಕೆಯ ಹಿರಿಯ ಸದಸ್ಯ ವಿ.ಎಂ. ಸುಧಾಕರ್ ಅವರಿಗೆ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದ್ದು, ಶಿಸ್ತಿನಿಂದ ನಡೆದುಕೊಳ್ಳದವರನ್ನು ಹೊರಹಾಕುವಂತೆ ಸೂಚಿಸಿದ್ದೇನೆ ಎಂದು ರಜನಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...