alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಫರೆಂಟ್ ಆಗಿರಲಿದೆ ರಜನಿಯ ‘2.0’ ಚಿತ್ರದ ಪ್ರಮೋಷನ್

rajani

ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ನಟಿಸಿರೋ 2.0 ಚಿತ್ರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ. ಲಿಸಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನೆಮಾ 2018ರ ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ಇದೊಂದು 3ಡಿ ಚಿತ್ರವಾಗಿದ್ದು, ಬರೋಬ್ಬರಿ 400 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗ್ತಾ ಇದೆ. ಚಿತ್ರ ಬಿಡುಗಡೆಗೂ ಮುನ್ನ ಭರ್ಜರಿ ಪ್ರಮೋಷನ್ ಗೆ ಪ್ಲಾನ್ ಮಾಡಲಾಗಿದೆ. ಚಿತ್ರದ ಪ್ರಮೋಷನ್ ಹೊಣೆ ನಟ ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಹೆಗಲೇರಿದೆ.

ರಜನಿ ಹಾಗೂ ಅಕ್ಕಿಯಷ್ಟೇ ಗಾತ್ರದ ಬಿಸಿಗಾಳಿಯ ಬೃಹತ್ ಬಲೂನು ಚಿತ್ರದ ಪ್ರಮೋಷನ್ ಗಾಗಿ ಪ್ರಪಂಚದಾದ್ಯಂತ ಸುತ್ತಾಡಲಿದೆ. 100 ಅಡಿ ಎತ್ತರದ ಹಾಟ್ ಏರ್ ಬಲೂನುಗಳ ಮೇಲೆ ರಜನೀಕಾಂತ್ ಹಾಗೂ ಅಕ್ಷಯ್ ಕುಮಾರ್ ಚಿತ್ರವಿರಲಿದೆ. ಇವುಗಳನ್ನು ಬೇರೆ ಬೇರೆ ದೇಶಗಳಲ್ಲಿ ನಡೆಯುವ ಬಲೂನ್ ಫೆಸ್ಟ್ ಗಳಿಗೆ ಕೊಂಡೊಯ್ಯಲು ಪ್ಲಾನ್ ಮಾಡಲಾಗಿದೆ.

ಇದಕ್ಕಾಗಿ ಹಾಲಿವುಡ್ ಜೊತೆಗೆ ಒಪ್ಪಂದ ಮಾಡಿಕೊಳ್ತಾ ಇದ್ದು ಲಾಸ್ ಏಂಜಲೀಸ್ ನಲ್ಲಿ ಕೂಡ ಬಲೂನ್ ಗಳು ಕಂಗೊಳಿಸಲಿವೆ. ಲಂಡನ್, ದುಬೈ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಬಲೂನ್ ಸಂಚಿರಿಸಲಿದೆ. ಭಾರತದ ಪ್ರಮುಖ ನಗರಗಳಲ್ಲೂ ಈ ವಿಶಿಷ್ಟ ರೀತಿಯ ಪ್ರಮೋಷನ್ ಹಮ್ಮಿಕೊಳ್ಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...