alex Certify
ಕನ್ನಡ ದುನಿಯಾ       Mobile App
       

Kannada Duniya

‘ದಂಗಲ್’ ಮತ್ತು ‘ಬಾಹುಬಲಿ’ಯನ್ನೂ ಮೀರಿಸ್ತಾರಂತೆ ರಜನಿ..!

ರಜನೀಕಾಂತ್ ರ ‘ಕಬಾಲಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸೂಪರ್ ಸ್ಟಾರ್ ಅಭಿನಯದ ‘2.0’ ಚಿತ್ರವಂತೂ ಭರ್ಜರಿ ಹಿಟ್ ಆಗಲಿದೆ ಅನ್ನೋದು ಸಿನಿ ತಜ್ಞರ ನಿರೀಕ್ಷೆ. ಶಂಕರ್ ನಿರ್ದೇಶನದ ಈ ಚಿತ್ರ, ರಾಜಮೌಳಿ ಅವರ ‘ಬಾಹುಬಲಿ’ ಹಾಗೂ ನಿತೇಶ್ ತಿವಾರಿ ಅವರ ‘ದಂಗಲ್’ ದಾಖಲೆಯನ್ನೆಲ್ಲ ಪುಡಿಗಟ್ಟಲಿದೆಯಂತೆ.

2010ರಲ್ಲಿ ಬಿಡುಗಡೆಯಾಗಿದ್ದ ಬ್ಲಾಕ್ ಬಸ್ಟರ್ ‘ಎಂದಿರನ್ ‘ಚಿತ್ರದ ಸೀಕ್ವಲ್ ‘2.0’. ಈ ಸಿನೆಮಾ ಮೂಲಕ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಕಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಚೈನೀಸ್ ಭಾಷೆಗೂ ‘2.0’ ಡಬ್ ಆಗ್ತಿದ್ದು, ಚೀನಾದ 10000-15000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಅಮೀರ್ ಖಾನ್ ರ ‘ದಂಗಲ್’ ಕೂಡ ಚೀನಾದಲ್ಲಿ ಸೂಪರ್ ಹಿಟ್ ಆಗಿತ್ತು. 1700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರೋ ‘ಬಾಹುಬಲಿ-2’ ಚಿತ್ರ ಇನ್ನೂ ಚೀನಾದಲ್ಲಿ ರಿಲೀಸ್ ಆಗಿಲ್ಲ. ಡಿಸೆಂಬರ್ ನಲ್ಲಿ ಬಿಡುಗಡೆಯಾಗೋ ಸಾಧ್ಯತೆ ಇದೆ. ರಮೇಶ್ ಬಾಲಾ ಅವರ ಲೆಕ್ಕಾಚಾರದ ಪ್ರಕಾರ ರಜನಿಕಾಂತ್ ರ ‘2.0’ ಭಾರತೀಯ ಚಿತ್ರರಂಗದ ಯಶಸ್ವಿ ಸಿನೆಮಾ ಎನಿಸಿಕೊಳ್ಳಲಿದೆಯಂತೆ. ಮೊದಲ ಬಾರಿ ರಜನಿ ಹಾಗೂ ಅಕ್ಷಯ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...