alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾಲಾ’ನ ಥಾರ್ ಜೀಪ್ ಜೊತೆಗೆ ಅಭಿಮಾನಿಗಳ ಸೆಲ್ಫಿ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಜನಿ ಬಳಸಿದ ಮಹೀಂದ್ರಾ ಕಂಪನಿಯ ಥಾರ್ ಜೀಪ್ ಕೂಡಾ ಜನಪ್ರಿಯವಾಗಿದೆ.

‘ಕಾಲಾ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದ್ದ ಪೋಸ್ಟರ್ ಗಳಲ್ಲಿ ಈ ಜೀಪ್ ಕಂಗೊಳಿಸಿತ್ತಲ್ಲದೇ ಚಿತ್ರದ ಕುರಿತ ಕುತೂಹಲವನ್ನೂ ಹೆಚ್ಚಿಸಿತ್ತು.

ಆ ಸಂದರ್ಭದಲ್ಲೇ ಕಾಲಾ ಚಿತ್ರದ ಪೋಸ್ಟರ್ ನೋಡಿದ್ದ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ, ಚಿತ್ರ ಬಿಡುಗಡೆಯಾದ ಬಳಿಕ ಈ ಜೀಪನ್ನು ತಮಗೆ ನೀಡುವಂತೆ ನಿರ್ಮಾಪಕ ಧನುಷ್ ಅವರನ್ನು ಕೋರಿದ್ದರು.

ಅದರಂತೆ ಧನುಷ್, ಚಿತ್ರದಲ್ಲಿ ಬಳಸಿದ್ದ ಮಹೀಂದ್ರಾ ಕಂಪನಿಯ ಥಾರ್ ಜೀಪನ್ನು ಆನಂದ್ ಮಹೀಂದ್ರಾ ಅವರಿಗೆ ನೀಡಿದ್ದಾರೆ. ಸದ್ಯಕ್ಕೆ ಇದನ್ನು ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ರಜನಿ ಅಭಿಮಾನಿಗಳಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೆಲ ದಿನಗಳ ಬಳಿಕ ಈ ಜೀಪ್ ಮಹೀಂದ್ರಾ ಕಂಪನಿಯ ವಸ್ತು ಸಂಗ್ರಹಾಲಯ ಸೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...