alex Certify
ಕನ್ನಡ ದುನಿಯಾ       Mobile App
       

Kannada Duniya

ಮತ ಜಾಗೃತಿಗೆ ದೀಪಿಕಾ ಡೈಲಾಗ್ ಬಳಸಿದ ಪೊಲೀಸ್

ಮತದಾನದ ಮೇಲೆಯೇ ಪ್ರಜಾಪ್ರಭುತ್ವದ ಯಶಸ್ಸು ನಿಂತಿದೆ ಎಂಬ ಸಂಗತಿಯನ್ನು ಪ್ರಾಥಮಿಕ ಶಾಲೆಯಲ್ಲೇ ನಾವೆಲ್ಲರೂ ಕಲಿತಿದ್ದೇವೆ.

ಚುನಾವಣೆ ವೇಳೆ ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಜವಾಬ್ದಾರಿ. ಈ ಕರ್ತವ್ಯದ ನೆನಪನ್ನು ರಾಜಸ್ಥಾನ ಪೊಲೀಸರು ತುಂಬಾ ನಾವೀನ್ಯ ವಿಧಾನದ ಮೂಲಕ ಮಾಡಿದ್ದಾರೆ.

ರಾಜಸ್ಥಾನ ರಾಜ್ಯ, ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ರಾಜಸ್ಥಾನ ಪೊಲೀಸರು ಡಿ.7 ರಂದು ಎಲ್ಲರೂ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಭಿನ್ನ ರೀತಿಯಲ್ಲಿ. ದೀಪಿಕಾ ಪಡುಕೋಣೆಯ ‘ಓಂ ಶಾಂತಿ ಓಂ’ ಚಿತ್ರದ ಪ್ರಸಿದ್ಧ ‘ಏಕ್ ಚುಟ್‌ಕೀ ಸಿಂಧೂರ್’ ಡೈಲಾಗ್ ಮೂಲಕ ಮತಜಾಗೃತಿ ಮೂಡಿಸಿದ್ದಾರೆ.

”ಒಂದು ಚಿಟಕಿ ಸಿಂಧೂರ್ ಹಾಗೂ ಮತದ ಮಹತ್ವ ಖಂಡಿತವಾಗಿಯೂ ನಾವು ತಿಳಿದಿರಬೇಕು. ಪ್ರಜಾಪ್ರಭುತ್ವದ ಶಕ್ತಿ ಒಂದು ಮತ, ಮತದಾರರ ಅಧಿಕಾರ ಒಂದು ಮತ ” ಎಂಬುದಾಗಿ ಟ್ವಿಟರ್‌ನಲ್ಲಿ ಪೊಲೀಸರು ಬರೆದುಕೊಂಡಿದ್ದಾರೆ.

ಪೊಲೀಸರ ವಿನೂತನ ಜಾಗೃತಿ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ರಾಜಸ್ಥಾನ ಪೊಲೀಸರು ‘ಥಗ್ಸ್ ಆಪ್ ಹಿಂದುಸ್ತಾನ್’ ಚಿತ್ರದ ಸ್ಟಿಲ್ ಬಳಸಿ ಸೈಬರ್ ಭದ್ರತೆಯ ಸಂದೇಶವನ್ನೂ ವಿನೂತನವಾಗಿ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...