alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೊಂದು ಸಿಹಿಸುದ್ದಿ

kabali

ಸ್ಟೈಲ್ ಕಿಂಗ್, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಸಿನೆಮಾ ‘ಕಬಾಲಿ’ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ. ರಜನಿ ಸಿನೆಮಾಗಳೆಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ರಜನಿಕಾಂತ್ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಡಾನ್ ಪಾತ್ರದಲ್ಲಿ ಮಿಂಚಿದ್ದಾರೆ. ಭಾರೀ ಯಶಸ್ಸು ಕಂಡಿದ್ದ ‘ಬಾಷಾ’ದಲ್ಲಿ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ನಂತರ ಅಂತಹ ಪಾತ್ರಗಳಲ್ಲಿ ನಟಿಸಿರಲಿಲ್ಲ. ಇದೀಗ ‘ಕಬಾಲಿ’ಯಲ್ಲಿ ಡಾನ್ ಪಾತ್ರದಲ್ಲಿ ಕಮಾಲ್ ಮಾಡಲಿದ್ದಾರೆ. ರಜನಿಕಾಂತ್ ‘ಕಬಾಲಿ’ಯಲ್ಲಿ ಕಾಣಿಸಿಕೊಂಡಿರುವ ಸ್ಟೈಲಿಶ್ ಫೋಟೋಗಳು, ಮ್ಯಾನರಿಸಂ, ಗೆಟಪ್ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಮತ್ತೊಂದು ಸಂಗತಿ ಎಂದರೆ ‘ಕಬಾಲಿ’ ತಮಿಳಿನಲ್ಲಿ ಮಾತ್ರವಲ್ಲದೇ, ತೆಲುಗು, ಹಿಂದಿಗೂ ಡಬ್ ಆಗಲಿದೆ. ವಿದೇಶಗಳಲ್ಲಿಯೂ ರಜನಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಲಯಾ ಭಾಷೆಗೂ ಡಬ್ ಮಾಡಲಾಗುವುದು. ಕಲೈಪುಲಿ ಧನು ನಿರ್ಮಾಣ ಮಾಡಿರುವ ಚಿತ್ರವನ್ನು ರಂಜಿತ್ ನಿರ್ದೇಶಿಸಿದ್ದಾರೆ.

ರಾಧಿಕಾ ಆಪ್ಟೆ, ಕಿಶೋರ್ ಮೊದಲಾದವರು ಅಭಿನಯಿಸಿದ್ದಾರೆ. ಏಪ್ರಿಲ್ ಇಲ್ಲವೇ ಮೇ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಮತ್ತೊಂದು ವಿಶೇಷವೆಂದರೆ ರಜನಿಕಾಂತ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದ್ದರೂ, ಚಿತ್ರತಂಡ ಕತೆಯ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟು ಕೊಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...