alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಿರ್ದೇಶಕನಿಗೆ ನಟ ಒತ್ತೆ ಇಡೋದೇನು..?

garuda

ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ, ವಿಶ್ವಚಿತ್ರರಂಗದ ಗಮನಸೆಳೆದ ನಿರ್ದೇಶಕ ಎಸ್. ಎಸ್. ರಾಜಮೌಳಿ. ‘ಮಗಧೀರ’, ‘ಬಾಹುಬಲಿ’ ಅವರ ನಿರ್ದೇಶನದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ರಾಜಮೌಳಿ ಸದ್ಯ ‘ಬಾಹುಬಲಿ-2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

‘ಬಾಹುಬಲಿ’ಗಾಗಿ ನಟ ಪ್ರಭಾಸ್ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳದೇ, ಸುಮಾರು 2 ವರ್ಷಗಳಿಂದ ‘ಬಾಹುಬಲಿ’ಯಲ್ಲೇ ತೊಡಗಿಕೊಂಡಿದ್ದಾರೆ. ಇದೀಗ ಬಂದಿರುವ ಮಾಹಿತಿಯಂತೆ ತಮ್ಮ ಕೆರಿಯರ್ ನ 3 ವರ್ಷಗಳನ್ನು ರಾಜಮೌಳಿ ಅವರಿಗೆ ಒತ್ತೆ ಇಡಲು ಜೂನಿಯರ್ ಎನ್.ಟಿ.ಆರ್. ತೀರ್ಮಾನಿಸಿದ್ದಾರೆ. ‘ಬಾಹುಬಲಿ-2’ ಮುಗಿದ ಕೂಡಲೇ ಬಹುನಿರೀಕ್ಷೆಯ ಚಿತ್ರ ‘ಗರುಡ’ ಸೆಟ್ಟೇರಲಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್. 3 ವರ್ಷ ಡೇಟ್ ಕೊಡಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ.

ರಾಜಮೌಳಿ ಮತ್ತು ಜೂನಿಯರ್ ಎನ್.ಟಿ.ಆರ್. ಕಾಂಬಿನೇಷನ್ ನಲ್ಲಿ ‘ಸ್ಟೂಡೆಂಟ್ ನಂಬರ್ 1’, ‘ಯಮದೊಂಗ’ ಮೊದಲಾದ ಯಶಸ್ವಿ ಚಿತ್ರಗಳು ಮೂಡಿಬಂದಿವೆ. ಈಗ ಸುಮಾರು 800 ಕೋಟಿ ರೂ. ಬಜೆಟ್ ನಲ್ಲಿ ಹಾಲಿವುಡ್ ಮೇಕಿಂಗ್ ಸ್ಟೈಲ್ ನಲ್ಲಿ ‘ಗರುಡ’ ನಿರ್ಮಾಣವಾಗಲಿದೆ. ರಾಜಮೌಳಿ ಮತ್ತು ಜೂನಿಯರ್ ಎನ್.ಟಿ.ಆರ್. ಮತ್ತೆ ಜೊತೆಯಾಗಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...