alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ರಾಜಮೌಳಿಗೆ ಭರ್ಜರಿ ಆಫರ್

ss-rajamouli mm

ಎಸ್. ಎಸ್. ರಾಜಮೌಳಿ ಹೆಸರು ಹೇಳುತ್ತಲೇ ನೆನಪಾಗುವುದು ದೃಶ್ಯವೈಭವದ ಭರ್ಜರಿ ಸಿನಿಮಾಗಳ ಸಾಲು. ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜಮೌಳಿ ಅವರೀಗ ‘ಬಾಹುಬಲಿ-2’ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ದೇಶದಲ್ಲಿ ಮಾತ್ರವಲ್ಲದೇ, ವಿದೇಶದಲ್ಲಿಯೂ ಗಮನ ಸೆಳೆದ ಹಾಲಿವುಡ್ ಸ್ಟೈಲ್ ಮೇಕಿಂಗ್ ಹೊಂದಿದ್ದ ‘ಬಾಹುಬಲಿ’ ಸಿನೆಮಾದ ಭರ್ಜರಿ ಯಶಸ್ಸು ರಾಜಮೌಳಿ ಅವರ ಹೆಸರನ್ನು ಉನ್ನತ ಹಂತಕ್ಕೇರಿಸಿದೆ. ಅವರ ನಿರ್ದೇಶನದ ‘ಛತ್ರಪತಿ’, ‘ಮಗಧೀರ’, ‘ಈಗ’, ಮೊದಲಾದ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ ಮಾತ್ರವಲ್ಲ, ಭರ್ಜರಿ ಯಶಸ್ಸು ಕಂಡಿವೆ. ‘ಬಾಹುಬಲಿ’ ಗಳಿಕೆಯಲ್ಲಿ ದಾಖಲೆ ಬರೆದ ಚಿತ್ರ. ಈ ಚಿತ್ರ ಹಿಂದಿಗೆ ಡಬ್ ಆಗಿ ಬರೋಬ್ಬರಿ 100 ಕೋಟಿ ರೂ. ಗೂ ಅಧಿಕ ಹಣ ಗಳಿಸುವ ಮೂಲಕ ಪ್ರಾದೇಶಿಕ ಭಾಷೆಯ ಚಿತ್ರವೊಂದು ಬಾಲಿವುಡ್ ನಲ್ಲಿ ಸಂಚಲನ ಸೃಷ್ಠಿಸಿತ್ತು.

‘ಬಾಹುಬಲಿ’ ಯಶಸ್ಸಿನ ಬಳಿಕ ರಾಜಮೌಳಿಗೆ ಬಾಲಿವುಡ್ ನಿಂದ ಭಾರೀ ಬೇಡಿಕೆ ಬರುತ್ತಿದ್ದು, ಸಿನಿಮಾ ನಿರ್ದೇಶನ ಮಾಡುವಂತೆ ಹಲವು ನಿರ್ಮಾಪಕರು ಸಂಪರ್ಕಿಸಿದ್ದಾರೆ. ‘ಬಾಹುಬಲಿ’ ಹಿಂದಿ ವರ್ಷನ್ ರಿಲೀಸ್ ಮಾಡಿದ್ದ ಕರಣ್ ಜೋಹರ್ ಅವರು ಕೂಡ ಸಂಪರ್ಕಿಸಿದ್ದು, ಅವರಿಗೆ ಮಾತ್ರ ರಾಜಮೌಳಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರು ‘ಬಾಹುಬಲಿ-2’ನಲ್ಲಿ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...