alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ-2’ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

S-S-RAJAMOULI

ಭಾರತ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾದ ಎಸ್. ಎಸ್. ರಾಜಮೌಳಿ ‘ಬಾಹುಬಲಿ’ ಯಶಸ್ಸಿನ ನಂತರ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಬಾಹುಬಲಿ-2’ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಚಿತ್ರದ ಬಗ್ಗೆ ರಾಜಮೌಳಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.

ಮೊದಲ ಭಾಗದ ಚಿತ್ರೀಕರಣದ ಸಂದರ್ಭದಲ್ಲಿಯೇ ಎರಡನೇ ಭಾಗದ ಶೇ.40 ರಷ್ಟು ಚಿತ್ರೀಕರಣ ಮಾಡಲಾಗಿತ್ತು. ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಹೆಚ್ಚು ಆಕ್ಷನ್ ಇರುತ್ತದೆ. ಬಾಹುಬಲಿ ಸಿನಿಮಾದಲ್ಲಿನ ಶಿವುಡು, ಶಿವಗಾಮಿ, ಕಟ್ಟಪ್ಪ, ಬಲ್ಲಾಳ ದೇವ ಮೊದಲಾದ ಪಾತ್ರಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಜನ ಕೂಡ ಇದನ್ನು ಇಷ್ಟ ಪಡುತ್ತಾರೆ. ಹಾಗೆಂದು ಸುಖಾಸುಮ್ಮನೆ ಕತೆಯನ್ನು ಎಳೆಯಲು ಬರುವುದಿಲ್ಲ. ಇಂತಹ ದೊಡ್ಡ ಪ್ರಾಜೆಕ್ಟ್ ಮಾಡುವಾಗ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ರಾಜಮೌಳಿ ಹೇಳಿದ್ದಾರೆ.

ಮತ್ತೊಂದು ಪ್ರಮುಖ ವಿಷಯವೆಂದರೆ ‘ಬಾಹುಬಲಿ’ ಡಿಜಿಟಲ್ ನಾವೆಲ್ ರೂಪದಲ್ಲಿಯೂ ಹೊರಬರಲಿದೆ. ಅಲ್ಲದೇ, ಮೂರನೇ ಭಾಗದ ಕತೆಯನ್ನು ಕೂಡ ಕತೆಗಾರ ವಿಜಯೇಂದ್ರ ಪ್ರಸಾದ್ ಸಿದ್ಧಪಡಿಸುತ್ತಿದ್ದಾರೆ. 2016ರ ಅಂತ್ಯಕ್ಕೆ ಇಲ್ಲವೇ, 2017ರ ಆರಂಭದಲ್ಲಿ ‘ಬಾಹುಬಲಿ2’ ರಿಲೀಸ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...