alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಎಸ್. ರಾಜಮೌಳಿಯಿಂದ ಮತ್ತೊಂದು ‘ಬಾಹುಬಲಿ’

bahubali-rRrEj

ಎಸ್. ಎಸ್. ರಾಜಮೌಳಿ ನಿರ್ದೇಶನದ, ಭರ್ಜರಿ ಯಶಸ್ಸು ಗಳಿಸಿದ ‘ಬಾಹುಬಲಿ’ ಸರಣಿಯ ಎರಡನೇ ಭಾಗ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ಸಂದರ್ಭದಲ್ಲಿ ರಾಜಮೌಳಿ ಮತ್ತೊಂದು ವಿಭಿನ್ನ ‘ಬಾಹುಬಲಿ’ಯನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

‘ಬಾಹುಬಲಿ’ ಎರಡನೇ ಭಾಗ ಬಿಡುಗಡೆಯಾದ ನಂತರ, ರಾಜಮೌಳಿ ಬಾಹುಬಲಿ ಭಾಗ-1 ಮತ್ತು ಭಾಗ -2ನ್ನು ಡಿಜಿಟಲ್ ಗ್ರಾಫಿಕ್ ನಾವೆಲ್ ರೂಪದಲ್ಲಿ ಹೊರತರಲಿದ್ದಾರೆ. ಈ ಬಾಹುಬಲಿಯನ್ನು ಮೊಬೈಲ್ ನಲ್ಲಿಯೂ ನೋಡಬಹುದಾಗಿದೆ. ದೇಶದಲ್ಲಿ ಸುಮಾರು 20 ಕೋಟಿ ಸ್ಮಾರ್ಟ್ ಫೋನ್ ಬಳಕೆದಾರರಿದ್ದು, ಅವರನ್ನೆಲ್ಲಾ ತಲುಪುವ ಉದ್ದೇಶದಿಂದ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ರಾಜಮೌಳಿ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.

‘ಬಾಹುಬಲಿ’ ಮೊದಲ ಭಾಗ ನಿರೀಕ್ಷೆ ಮೀರಿ ಯಶಸ್ಸು ಗಳಿಸಿರುವುದರಿಂದ ಎರಡನೇ ಭಾಗದಲ್ಲಿ ವಿಭಿನ್ನ ಪ್ರಯೋಗ ಮಾಡಲಾಗಿದೆ. ಹಾಲಿವುಡ್ ಮಾದರಿ ಮೇಕಿಂಗ್ ಈ ಚಿತ್ರದಲ್ಲಿಯೂ ಮುಂದುವರೆಯಲಿದೆ. ಜೊತೆಗೆ ಸಿನಿಮಾದ ಜೊತೆಗೆ ಡಿಜಿಟಲ್ ಗ್ರಾಫಿಕ್ ನಾವೆಲ್ ರೂಪದಲ್ಲಿ ‘ಬಾಹುಬಲಿ’ ಮೂಡಿಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...