alex Certify
ಕನ್ನಡ ದುನಿಯಾ       Mobile App
       

Kannada Duniya

‘ಒಡೆಯರ್’ ಚಿತ್ರದ ಕುರಿತು ರಾಜಮಾತೆ ಪ್ರಮೋದಾ ದೇವಿ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯರ್’ ಚಿತ್ರದ ಟೈಟಲ್ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಲ ಸಂಘಟನೆಗಳ ಕಾರ್ಯಕರ್ತರು ಟೈಟಲ್ ಬದಲಾಯಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಇದೀಗ ‘ಒಡೆಯರ್’ ಚಿತ್ರದ ಟೈಟಲ್ ಕುರಿತಂತೆ ಪ್ರತಿಕ್ರಿಯಿಸಿರುವ ರಾಜ ಮಾತೆ ಪ್ರಮೋದಾ ದೇವಿ, ಚಿತ್ರಕ್ಕೆ ಒಡೆಯರ್ ಎಂದು ಹೆಸರಿಟ್ಟಿರುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಚಿತ್ರದಲ್ಲಿ ರಾಜಮನೆತನದ ಕುರಿತು ಚಿತ್ರೀಕರಿಸಿದರೆ ಅದಕ್ಕೆ ಆಕ್ಷೇಪಿಸುತ್ತೇವೆ ಎಂದು ಹೇಳಿದ್ದಾರೆ.

ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತಾಗಿದ್ದು, ಅವರ ಕುರಿತು ನಮಗೆ ಅಪಾರ ಅಭಿಮಾನವಿದೆ. ಮೈಸೂರಿನ ಜನತೆ ಅರಸರನ್ನು ಭಗವಂತನ ರೀತಿಯಲ್ಲಿ ಕಾಣುತ್ತಿದ್ದು, ಕಮರ್ಷಿಯಲ್ ಚಿತ್ರವೊಂದಕ್ಕೆ ಒಡೆಯರ್ ಹೆಸರಿಟ್ಟಿರುವುದು ಸೂಕ್ತವಲ್ಲವೆಂದು ಮೈಸೂರಿನ ಕೆ.ಆರ್. ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...