alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಟಿಪ್ಲೆಕ್ಸ್ ನಲ್ಲಿನ ಪಾಪ್ ಕಾರ್ನ್ ವಿಚಾರಕ್ಕೆ ನಡೆಯಿತು ಹಲ್ಲೆ

ಪುಣೆಯ ಸಿನಿಮಾ ಮಾಲ್ ಒಂದರಲ್ಲಿ ರಾಜ್ ಠಾಕ್ರೆ ಬೆಂಬಲಿತ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸದಸ್ಯರು ಅಕ್ರಮವೊಂದನ್ನ ಬಯಲಿಗೆಳೆಯುವ ಭರದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಒಂದು ಈಗ ಎಲ್ಲಾ ಕಡೆಯಲ್ಲಿ ವೈರಲ್ ಆಗಿದೆ.

ಬಾಂಬೆ ಹೈಕೊರ್ಟ್ ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚು ಬೆಲೆಗೆ ಪಾಪ್ ಕಾರ್ನ್ ಮತ್ತು ಆಹಾರ ಪದಾರ್ಥಗಳನ್ನ ಮಾರಾಟ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ಹಾಗಿದ್ದರು ಪುಣೆಯ ಸಿನಿಮಾ ಮಾಲ್ ಒಂದರಲ್ಲಿ 250 ರೂಪಾಯಿಗೆ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದರು. ವಿಚಾರ ತಿಳಿದ ಎಂಎನ್ಎಸ್ ಕಾರ್ಯಕರ್ತರು ಈ ಬಗ್ಗೆ ಮಾಲ್ ಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಪಾಪ್ ಕಾರ್ನ್ ಗೆ 250 ರೂಪಾಯಿ ನಿಗದಿ ಪಡಿಸಿರೋದು ಗೊತ್ತಾಗಿದೆ.

ಈ ಬಗ್ಗೆ ಎಂಎನ್ಎಸ್ ಕಾರ್ಯಕರ್ತರು ಮಾಲ್ ಮ್ಯಾನೇಜರ್ ಗೆ ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಆದೇಶ ನೀಡಿರೋದು ನಿಮಗೆ ಗೊತ್ತಿಲ್ವಾ ಅಂತ ಕೇಳಿದ್ದಾರೆ. ಅದಕ್ಕೆ ಅತ ನನಗೆ ಮರಾಠಿ ಓದೋದಕ್ಕೆ ಬರೋದಿಲ್ಲ ಅಂತ ಹೇಳಿದ್ದಾನೆ. ಆನಂತರದಲ್ಲಿ ನಾವು ನಮ್ಮದೇ ಶೈಲಿಯಲ್ಲಿ ಆತನಿಗೆ ಕೋರ್ಟ್ ಆದೇಶವನ್ನ ಅರ್ಥ ಮಾಡಿಸಿದೆವು ಅಂತ ಎಂಎನ್ಎಸ್ ಕಾರ್ಯಕರ್ತರು ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಜೂನ್ 27ರಂದು ಬಾಂಬೆ ಹೈಕೋರ್ಟ್ ಮಾಲ್ ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬೆಲೆಗೆ ಆಹಾರ ಪದಾರ್ಥಗಳ ಮಾರಾಟ ಮತ್ತು ಹಿರಿಯ ನಾಗರಿಕರ ಕಡೆಗಣನೆ ಬಗ್ಗೆ, ಮಹಾರಾಷ್ಟ್ರ ಸರ್ಕಾರವನ್ನ ತರಾಟೆ ತೆಗೆದುಕೊಂಡಿದೆ. ಸಾರ್ವಜನಿಕರಿಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಅವರ ಆಹಾರ ತೆಗೆದುಕೊಂಡು ಹೋಗೋದಕ್ಕೆ ನೀವು ಅನುಮತಿ ಕೊಟ್ಟಿಲ್ಲ. ಪರ್ಯಾಯ ಮಾರ್ಗವನ್ನು ಹುಡುಕಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲಿ ಆಹಾರ ವಸ್ತುಗಳ ದರವನ್ನು ನಿಯಂತ್ರಣಾ ವ್ಯವಸ್ಥೆಯನ್ನ ಏಕೆ ಜಾರಿಗೊಳಿಸಿಲ್ಲ ಅಂತ ಪ್ರಶ್ನೆ ಮಾಡಿದೆ. ಮಲ್ಟಿಪ್ಲೆಕ್ಸ್ ಗಳ ಆಹಾರ ದರ ನಿಯಂತ್ರಣ ವ್ಯವಸ್ಥೆಯನ್ನ ಜಾರಿಗೊಳಿಸಲು ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...