alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಆಸಿನ್ ಗೆ ಸರ್ಪ್ರೈಸ್ ನೀಡಿದ ರಾಹುಲ್

dc-Cover-kenumnl2d0lhiqtp8i7rj1onl0-20160214100607.Medi

ಬಾಲಿವುಡ್ ನಟಿ ಆಸಿನ್ ಜನವರಿ 19 ರಂದು ಉದ್ಯಮಿ ರಾಹುಲ್ ಶರ್ಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳಿಗೆ ಇಂದು ವಿವಾಹ ನಂತರದ ಮೊದಲ ಪ್ರೇಮಿಗಳ ದಿನ’.

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅತ್ಮೀಯರಾಗಿರುವ ರಾಹುಲ್ ಶರ್ಮಾ ಅವರ ಮೂಲಕವೇ ಆಸಿನ್ ಗೆ ಪರಿಚಿತರಾಗಿದ್ದರು. ಈ ಪರಿಚಯ ಕೊನೆಗೆ ಪ್ರೀತಿಗೆ ತಿರುಗಿದ್ದು, ಜೊತೆ ಜೊತೆಯಾಗಿ ಸುತ್ತಾಡುತ್ತಿದ್ದ ಈ ಜೋಡಿ ಅಂತಿಮವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು.

ವಿವಾಹ ನಂತರ ಇಂದು ‘ಪ್ರೇಮಿಗಳ ದಿನ’ ವನ್ನು ದಂಪತಿಗಳು ಆಚರಿಸುತ್ತಿದ್ದು, ಪತ್ನಿ ಆಸಿನ್ ಗೆ ರಾಹುಲ್ ಶರ್ಮಾ ಸರ್ಪ್ರೈಸ್ ಕೊಟ್ಟಿದ್ದಾರೆ. ದೆಹಲಿಯ ತಮ್ಮ ಭವ್ಯ ಬಂಗಲೆಯನ್ನು ಗುಲಾಬಿ ಹೂಗಳ ಮೂಲಕ ಆಲಂಕರಿಸಿದ್ದ ರಾಹುಲ್, ಆಸಿನ್ ಗೆ ಈ ಕುರಿತು ಯಾವುದೇ ಸುಳಿವು ನೀಡಿರಲಿಲ್ಲ. ಸ್ವತಃ ತಾವೇ ಖುದ್ದಾಗಿ ನಿಂತು ರಾಹುಲ್ ಈ ವ್ಯವಸ್ಥೆ ಮಾಡಿಸಿದ್ದು, ಇದನ್ನು ನಂತರ ಕಂಡ ಆಸಿನ್ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...