alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ಜೊತೆ ರಾಘಣ್ಣ ಸೆಲ್ಫಿ

ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು, ಅವರ ಮೊದಲ ಚಿತ್ರದ ಮುಹೂರ್ತ ಸಮಾರಂಭಕ್ಕೆ ನಟ ದರ್ಶನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು.

ದರ್ಶನ್ ಮತ್ತು ಶಿವಣ್ಣ, ರಾಘಣ್ಣ ಎಲ್ಲರೂ ಒಟ್ಟಾಗಿ ಕಾಣುವುದೇ ಅಪರೂಪ. ಈ ಅಪರೂಪದ ಕ್ಷಣಕ್ಕೆ ಆದಿತ್ಯ ಅವರ ಚಿತ್ರದ ಮುಹೂರ್ತ ಸಂದರ್ಭ ಸಾಕ್ಷಿಯಾಯಿತು. ಚಿತ್ರದ ಮೊದಲ ದೃಶ್ಯಕ್ಕೆ ಶಿವರಾಜ್ ಕುಮಾರ್ ಹಾಗೂ ದರ್ಶನ್ ಕ್ಲಾಪ್ ಮಾಡಿದ್ದಾರೆ.

ಈ ವೇಳೆ ರಾಘಣ್ಣ ಹಾಗೂ ದರ್ಶನ್ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈ ಫೋಟೋ ಈಗ ವೈರಲ್ ಆಗಿದೆ. ಈ ವೇಳೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ದರ್ಶನ್ ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡರು.

ಇನ್ನು ಶಶಿಕುಮಾರ್ ಮಗ ಆದಿತ್ಯ ಅಭಿನಯದ ಮೊದಲ ಚಿತ್ರ ಇದಾಗಿದ್ದು, ಚಿತ್ರಕ್ಕೆ ‘ಮೊಡವೆ’ ಎಂದು ಹೆಸರಿಡಲಾಗಿದೆ. ಆದಿತ್ಯಗೆ ಅಪೂರ್ವ ನಾಯಕಿಯಾಗಿದ್ದಾರೆ. ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...